ಎಂಟು ಮಂದಿಗೆ ಕಚ್ಚಿದ ಹುಚ್ಚುನಾಯಿ
Sunday, July 21, 2024
ಎಂಟು ಮಂದಿಗೆ ಕಚ್ಚಿದ ಹುಚ್ಚು ನಾಯಿ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ನಗರದಲ್ಲಿ ಹುಚ್ಚು ನಾಯಿಯೊಂದು 8 ಮಂದಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ತೀರಾ ಬಸವಳಿದ ಸ್ಥಿತಿಯಲ್ಲಿದ್ದ ಆ ನಾಯಿ, ರಸ್ತೆಯಲ್ಲಿ ಹೋಗುವಾಗ ಎದುರಿಗೆ ಸಿಕ್ಕಿದವರೆಲ್ಲರಿಗೂ ಕಚ್ಚಿಕೊಂಡು ಹೋಗಿದೆ. ಕೆಲವರ ಕಾಲಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದೆ.
ಗಾಯಗೊಂಡವರೆಲ್ಲರೂ ಉಡುಪಿ ಜಿಲ್ಲಾಸ್ಪತ್ರೆಗೆ ತೆರಳಿ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಬಳಿಕ ಪಶು ವೈದ್ಯರು ಹಾಗೂ ಪ್ರಾಣಿ ದಯಾ ಸಂಘದವರನ್ನು ಸ್ಥಳಕ್ಕೆ ಕರೆಸಿ ನಾಯಿಗೆ ಚುಚ್ಚು ಮದ್ದು ನೀಡಲಾಗಿದೆ.