ಸ್ಕೂಟರಿಗೆ ನಾಯಿ ಕಟ್ಟಿ ಎಳೆದೊಯ್ದ ಭೂಪ!
Sunday, July 21, 2024
ಸ್ಕೂಟರಿಗೆ ನಾಯಿ ಕಟ್ಟಿ ಎಳೆದೊಯ್ದ ಭೂಪ!
ಲೋಕಬಂಧುನ್ಯೂಸ್ ಡೆಸ್ಕ್, ಶಿರ್ವ
ಕಾಪು ತಾಲೂಕಿನ ಶಿರ್ವದಲ್ಲಿ ಶನಿವಾರ ಅಮಾನವೀಯ ಘಟನೆಯೊಂದು ನಡೆದಿದೆ. ದ್ವಿಚಕ್ರ ವಾಹನಕ್ಕೆ ನಾಯಿಯನ್ನು ಕಟ್ಟಿ ವ್ಯಕ್ತಿಯೊಬ್ಬ ಎಳೆದೊಯ್ದಿದ್ದಾನೆ!
ನಾಯಿಯ ಕೊರಳಿಗೆ ಸರಪಳಿ ಬಿಗಿದು ತುಂಬ ದೂರದ ತನಕ ನಾಯಿಯನ್ನು ರಸ್ತೆಯಲ್ಲೇ ಎಳೆದೊಯ್ದಿದ್ದಾನೆ.
ಶಿರ್ವ ಪೇಟೆಯಲ್ಲಿ ಸುಮಾರು ದೂರದ ತನಕ ನಾಯಿಯನ್ನು ಎಳೆದೊಯ್ದು ವಿಕೃತಿ ಮೆರೆದಿದ್ದು ದುಷ್ಕರ್ಮಿಯ ಕೃತ್ಯಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.