ಭಾರೀ ಮಳೆ: ಬೈಂದೂರು, ಹೆಬ್ರಿ ಶಾಲೆಗಳಿಗೆ ರಜೆ
Thursday, July 18, 2024
ಭಾರೀ ಮಳೆ: ಬೈಂದೂರು, ಹೆಬ್ರಿ ಶಾಲೆಗಳಿಗೆ ರಜೆ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಜಿಲ್ಲೆಯಲ್ಲಿ ಗುರುವಾರ ವ್ಯಾಪಕ ಮಳೆಯಾಗುತ್ತಿದ್ದರೂ ಬೈಂದೂರು ಮತ್ತು ಹೆಬ್ರಿ ತಾಲೂಕುಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಎರಡು ತಾಲೂಕುಗಳ ಶಾಲೆಗಳಿಗೆ ಇಂದು (ಜುಲೈ 18) ರಜೆ ಘೋಷಿಸಲಾಗಿದೆ.
ಹೆಬ್ರಿ ಹಾಗೂ ಬೈಂದೂರು ತಾಲೂಕುಗಳ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಉಭಯ ತಾಲೂಕುಗಳ ತಹಶಿಲ್ದಾರರ ಪ್ರಕಟಣೆ ತಿಳಿಸಿದೆ.