
ಕೃಷ್ಣ ಜನ್ಮಾಷ್ಟಮಿಗೆ ರಾಜ್ಯಪಾಲರಿಗೆ ಆಹ್ವಾನ
Monday, July 22, 2024
ಕೃಷ್ಣ ಜನ್ಮಾಷ್ಟಮಿಗೆ ರಾಜ್ಯಪಾಲರಿಗೆ ಆಹ್ವಾನ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ಚತುರ್ಥ ಪರ್ಯಾಯ ಅವಧಿಯಲ್ಲಿ ಇಲ್ಲಿನ ಕೃಷ್ಣ ಮಠದಲ್ಲಿ ಆಗಸ್ಟ್ 1ರಿಂದ 24ರ ವರೆಗೆ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆಯುವ ಶ್ರೀಕೃಷ್ಣ ಮಾಸೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಬೆಂಗಳೂರಿನ ರಾಜಭವನದಲ್ಲಿ ಸೋಮವಾರ ಆಹ್ವಾನ ನೀಡಲಾಯಿತು.
ಆ. 26 ಮತ್ತು 27ರಂದು ಕೃಷ್ಣಾಷ್ಟಮಿ ವಿಟ್ಲಪಿಂಡಿ ಮಹೋತ್ಸವ ನಡೆಯಲಿದೆ.