ಟೂರಿಸ್ಟ್ ವಾಹನಗಳಿಗೆ ಕಡ್ಡಾಯ ಜಿಪಿಎಸ್, ಪ್ಯಾನಿಕ್ ಅಳವಡಿಕೆ ರದ್ದತಿಗೆ ಆಗ್ರಹ
Tuesday, July 23, 2024
ಟೂರಿಸ್ಟ್ ವಾಹನಗಳಿಗೆ ಕಡ್ಡಾಯ ಜಿಪಿಎಸ್, ಪ್ಯಾನಿಕ್ ಅಳವಡಿಕೆ ರದ್ದತಿಗೆ ಆಗ್ರಹ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ಟೂರಿಸ್ಟ್ ವಾಹನಗಳಿಗೆ ಜಿಪಿಎಸ್ ಮತ್ತು ಪ್ಯಾನಿಕ್ ಬಟನ್ ಕಡ್ಡಾಯ ಅಳವಡಿಕೆ ವಿರೋಧಿಸಿ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ ಕೆ. ರಘುಪತಿ ಭಟ್ ಮಾತನಾಡಿ, ಬೆಂಗಳೂರಿನಂಥ ಮಹಾನಗರಗಳಲ್ಲಿ ಇದು ನಡೆಯಬಹುದು. ಆದರೆ, ಸೀಮಿತ ಜನಸಂಖ್ಯೆ
ಟ್ಯಾಕ್ಸಿಯ ಹೊಸ ವಾಹನಗಳಿಗೆ ಅಳವಡಿಸುವ ನಿರ್ಧಾರವನ್ನು ಸರಕಾರ ಮಾಡಬೇಕು. ಹಳೆಯ ವಾಹನಗಳಿಗೆ ಇದನ್ನು ಅಳವಡಿಸುವ ಸ್ಥಿತಿಯಲ್ಲಿ ಚಾಲಕರು- ಮಾಲಕರು ಇಲ್ಲ. ಈಗಾಗಲೇ ಟ್ಯಾಕ್ಸಿ ಚಾಲಕ ಮಾಲಕರು ಹಲವಾರು ತೆರಿಗೆಗಳನ್ನು ಪಾವತಿಸಿ ನಷ್ಟದಲ್ಲಿ ದಿನ ದೂಡುತ್ತಿದ್ದಾರೆ ಎಂದರು.
ವೈಟ್ ಬೋರ್ಡ್‌ನಲ್ಲಿ ಬಾಡಿಗೆ ಮಾಡುವವರಿಗೆ ಸರಕಾರ ಕಡಿವಾಣ ಹಾಕಿದರೆ ಈ ಉದ್ಯಮ ಚೇತರಿಕೆ ಕಾಣಲು ಸಾಧ್ಯವಿದೆ. ಸರಕಾರ ಇದನ್ನು ಗಮನಿಸಿ ಕಳ್ಳ ಉದ್ಯಮ ನಿಲ್ಲಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಗಮನಹರಿಸಬೇಕು.
ಸಾಧ್ಯವಿದ್ದರೆ ಖಾಸಗಿಯಾಗಿ ಬಾಡಿಗೆ ಮಾಡುವ ವಾಹನಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಿ. ಟ್ಯಾಕ್ಸಿ ಉದ್ಯಮದವರು ಒಗ್ಗಟ್ಟಾಗಿ ಇದರ ವಿರುದ್ಧ ಹೋರಾಡಿದರೆ ಯಶಸ್ಸು ಸಿಗಲಿದೆ.
ಸರಕಾರ ಮನಸ್ಸು ಮಾಡಿದರೆ ಈ ಸಮಸ್ಯೆಯನ್ನು ಸುಲಭದಲ್ಲಿ ಪರಿಹಾರ ಮಾಡಬಹುದು. ಟ್ಯಾಕ್ಸಿಮನ್‌ಗಳ ಧ್ವನಿಯನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡು ಇದಕ್ಕೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದರು.
ಜಿಲ್ಲಾ ಟ್ಯಾಕ್ಸಿಮನ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ. ಕೋಟ್ಯಾನ್, ಕೆಟಿಡಿಓ ಅಧ್ಯಕ್ಷ ರಮೇಶ್ ಕುಂದಾಪುರ, ಉಪಾಧ್ಯಕ್ಷರಾದ ಮಂಜು ಪೂಜಾರಿ, ರಾಘವೇಂದ್ರ ಸೋಮಯಾಜಿ, ಜಯಕರ ಕುಂದರ್, ರವಿ ಶೆಟ್ಟಿ ಮತ್ತು ಸತೀಶ್ ನಾಯಕ್, ಕೋಶಾಧಿಕಾರಿ ಪ್ರಕಾಶ್ ಅಡಿಗ, ಜೊತೆ ಕೋಶಾಧಿಕಾರಿ ಕೃಷ್ಣ ಕೋಟ್ಯಾನ್, ಸಂಘಟನಾ ಕಾರ್ಯದರ್ಶಿಗಳಾದ ವಿಕ್ರಂ ರಾವ್, ಸತೀಶ್ ಶೆಟ್ಟಿ, ಮಹೇಶ್ ಕುಮಾರ್, ವಿನ್ಸಿ ಡಿ’ಸೋಜಾ ಮತ್ತಿತರರು ಉಪಸ್ಥಿತರಿದ್ದರು.
ಅನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಮಮತಾದೇವಿ ಹಾಗೂ ಉಡುಪಿ ಪ್ರಾದೇಶಿಕ ಸಾರಿಗೆ ಅಧಿಕಾರಿ
ಎಲ್.ಪಿ. ನಾಯ್ಕ್ ಅವರಿಗೆ ಮನವಿ ಸಲ್ಲಿಸಲಾಯಿತು.