
ಆರ್.ಎಸ್.ಎಸ್. ಕಾರ್ಯಕರ್ತ ನಾಗರಾಜ ಭಟ್ ಇನ್ನಿಲ್ಲ
Tuesday, July 23, 2024
ಆರ್.ಎಸ್.ಎಸ್. ಕಾರ್ಯಕರ್ತ ನಾಗರಾಜ ಭಟ್ ಇನ್ನಿಲ್ಲ
ಲೋಕಬಂಧುನ್ಯೂಸ್ ಡೆಸ್ಕ್, ಹುಬ್ಬಳ್ಳಿ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್.ಎಸ್.ಎಸ್.)ದ ಕುಟುಂಬ ಪ್ರಬೋಧನ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕ ಪ. ರಾ. ನಾಗರಾಜ ಭಟ್ (62 ವರ್ಷ) ಮಂಗಳವಾರ ಅಲ್ಪಕಾಲದ ಅಸೌಖ್ಯದಿಂದ ಇಲ್ಲಿರುವ ತಮ್ಮ ಮನೆಯಲ್ಲಿ ನಿಧನರಾದರು.
ಅಥಣಿಯವರಾದ ಅವರು ಸಂಘದ ನಿಷ್ಠಾವಂತ ಕಾರ್ಯಕರ್ತರಾಗಿ ವಿವಿಧ ಸ್ತರದ ಜವಾಬ್ದಾರಿ ಹೊಂದಿದ್ದರು.
ಕುಟುಂಬ ಪ್ರಬೋಧನ ಗತಿವಿಧಿಗೆ ನಮ್ಮ ಪ್ರಾಂತದಲ್ಲಿ ಹೊಸ ದಿಕ್ಕನ್ನು ನೀಡಿ ಮಾದರಿ ಗತಿವಿಧಿಯ ಸ್ಥಾನಕ್ಕೆ ತೆಗೆದುಕೊಂಡು ಹೋಗುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ಅವರು, ಕಳೆದ ಕೆಲವು ತಿಂಗಳಿನಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು.
12 ವರ್ಷ ಕಾಲ ಪ್ರಚಾರಕರಾಗಿ ವಿಭಾಗ, ಪ್ರಾಂತ ಸ್ತರದಲ್ಲಿ ಸಂಘದ ಜವಾಬ್ದಾರಿ ನಿರ್ವಹಿಸಿದ್ದರು.
ಮೃತರು ಪತ್ನಿ ಹಾಗೂ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿಯನ್ನು ಅಗಲಿದ್ದಾರೆ.
ಸಂತಾಪ
ನಾಗರಾಜ ಭಟ್ ನಿಧನಕ್ಕೆ ರಾ. ಸ್ವ. ಸಂಘದ ಕರ್ನಾಟಕ ಉತ್ತರ ಪ್ರಾಂತ ಸಂಘಚಾಲಕ ಬಸವರಾಜ ಡಂಬಳ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಮೊದಲಾದವರು ಸಂತಾಪ ಸೂಚಿಸಿದ್ದಾರೆ.
ಇಲ್ಲಿನ ಗೋಕುಲ ರಸ್ತೆಯ ಕೋಟಿಲಿಂಗ ನಗರದಲ್ಲಿ ಮಂಗಳವಾರ ಸಂಜೆ ಅಂತ್ಯಕ್ರಿಯೆ ನಡೆಯಿತು.
ಪ.ರಾ. ನಾಗರಾಜ ಭಟ್ ಪೂರ್ವಿಕರು ದ.ಕ. ಜಿಲ್ಲೆಯ ಮೂಡುಬಿದಿರೆ ಸಮೀಪದ ಅಶ್ವತ್ಥಪುರ ಬಳಿಯ ಪಳ್ಳ ಎಂಬಲ್ಲಿಯವರು.