.jpg)
ಪರ್ಕಳದಲ್ಲಿ ಬಸವನಹುಳು ಕಾಟ
Friday, July 19, 2024
ಪರ್ಕಳದಲ್ಲಿ ಬಸವನಹುಳು ಕಾಟ
ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ
ರಾತ್ರಿ ಹೊತ್ತಿನಲ್ಲಿ ಅವುಗಳ ಸಂಚಾರ ಹೆಚ್ಚಾಗಿದ್ದು ಪಪ್ಪಾಯಿ ಗಿಡ, ಹೂವಿನ ಗಿಡ, ಕ್ರೋಟನ್ ಗಿಡಗಳ ಎಲೆಗಳನ್ನು ತಿಂದು ನಾಶಪಡಿಸುತ್ತಿವೆ.
ಅವು ಹೊರಸೂಸುವ ದ್ರವ್ಯ ದುರ್ವಾಸನೆಯಿಂದ ಕೂಡಿದ್ದು, ಸ್ವಚ್ಛತೆ ಮಾಡಿದರೂ ಮತ್ತೆ ಮತ್ತೆ ಬಾಧಿಸುತ್ತಿವೆ ಎಂದು ಸ್ಥಳೀಯರಾದ ಗಣೇಶ್ ರಾಜ್ ಸರಳೆಬೆಟ್ಟು ಮತ್ತು ರಾಜೇಶ್ ಪ್ರಭು ಪರ್ಕಳ ತಿಳಿಸಿದ್ದಾರೆ.
ಜನವಸತಿ ಪ್ರದೇಶದಲ್ಲಿ ಅವುಗಳ ಉಪಟಳ ಹೆಚ್ಚಾಗಿದ್ದು ನಗರಸಭೆ ಸೂಕ್ತ ಮದ್ದು ಸಿಂಪಡಿಸಿ, ಅವುಗಳ ಸಮಸ್ಯೆಗೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.