-->
ಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ

ಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ

ಕೃಷ್ಣಮಠದಲ್ಲಿ ತಪ್ತ ಮುದ್ರಾಧಾರಣೆ

ಲೋಕಬಂಧುನ್ಯೂಸ್ ಡೆಸ್ಕ್, ಉಡುಪಿ

ಆಷಾಢ ಏಕಾದಶಿ (ಪ್ರಥಮ ಏಕಾದಶಿ) ಪ್ರಯುಕ್ತ ಬುಧವಾರ ಶ್ರೀಕೃಷ್ಣ ಮಠದಲ್ಲಿ ತಪ್ತ ಮುದ್ರಾಧಾರಣೆ ನಡೆಯಿತು.
ಸುದರ್ಶನ ಹೋಮದ ಅಗ್ನಿಯಲ್ಲಿ ಲೋಹದ ಶಂಖ ಚಕ್ರಗಳ ಮುದ್ರೆಗಳನ್ನು ಭುಜ, ಎದೆ, ತೋಳುಗಳಿಗೆ ಒತ್ತಿಸಿಕೊಳ್ಳುವ ಕ್ರಮ ತಪ್ತ ಮುದ್ರಾಧಾರಣೆಯಾಗಿದ್ದು, ಮಾಧ್ವ ಸಂಪ್ರದಾಯದಲ್ಲಿ ತಪ್ತ ಮುದ್ರಾಧಾರಣೆಗೆ ಬಹಳ ಮಹತ್ವ ಇದೆ.
ದೇಹಶುದ್ಧಿ ಮತ್ತು ರೋಗ ನಿರೋಧಕ ಶಕ್ತಿ ವರ್ಧನೆಗೆ ತಪ್ತ ಮುದ್ರಾಧಾರಣೆ ಪೂರಕ ಎಂಬ ನಂಬಿಕೆ ವೈಷ್ಣವರಲ್ಲಿದೆ.
ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮೊದಲಿಗೆ ಸ್ವತಃ ತಪ್ತ ಮುದ್ರಾಧಾರಣೆ ಮಾಡಿಕೊಂಡು ಬಳಿಕ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು.
ಬಳಿಕ ಉಭಯ ಯತಿಗಳು ಭಕ್ತರಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
ಆಬಾಲವೃದ್ಧರಾದಿಯಾಗಿ ಅನೇಕ ಮಂದಿ ಭಕ್ತರು ಮುದ್ರೆ ಹಾಕಿಸಿಕೊಂಡರು.
ಏಕಾದಶಿ ಪ್ರಯುಕ್ತ ಉಪವಾಸ ವ್ರತ ಆಚರಣೆ ಇತ್ತು. ಹಾಗಾಗಿ ಕೃಷ್ಣಮಠದಲ್ಲಿ ಭಕ್ತಾದಿಗಳಿಗೆ ಭೋಜನ ಪ್ರಸಾದ ಇದ್ದಿರಲಿಲ್ಲ.
ಶ್ರೀಕೃಷ್ಣನಿಗೆ ಅರ್ಜುನ ಮುದ್ರಾಯೋಗ ಅಲಂಕಾರ ಮಾಡಲಾಗಿತ್ತು.

Ads on article

Advertise in articles 1

advertising articles 2

Advertise under the article