
ರಸಪ್ರಶ್ನೆ ಸ್ಪರ್ಧೆಯಲ್ಲಿ ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ
Sunday, November 3, 2024
ಲೋಕಬಂಧು ನ್ಯೂಸ್, ಉಡುಪಿ
ನ್ಯಾಷನಲ್ ನಿಯೋನಾಟಾಲಜಿ ಫೋರಮ್ ಅ. 27ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಷ್ಟ್ರ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ನರ್ಸಿಗ್ ಸಿಬ್ಬಂದಿಗಳಾದ ಶ್ರೀದೇವಿ ಆರ್.ಡಿ. ಮತ್ತು ಶ್ರೀದೇವಿ ಅವರು ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ, ಡಿ.7ರಂದು ಚೆನ್ನೈನಲ್ಲಿ ನಡೆಯುವ ನಿಯೋಕಾನ್ 2024ರ ರಾಷ್ಟ್ರ ಮಟ್ಟದ ಅಂತಿಮ ಸುತ್ತಿನ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ.
ಅವರೀರ್ವರನ್ನೂ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅಭಿನಂದಿಸಿದರು.