-->
ನ.8: ಉಡುಪಿಯ ನೇತ್ರಜ್ಯೋತಿ ಕಾಲೇಜು ನೂತನ ಕಟ್ಟಡ ಉದ್ಘಾಟನೆ

ನ.8: ಉಡುಪಿಯ ನೇತ್ರಜ್ಯೋತಿ ಕಾಲೇಜು ನೂತನ ಕಟ್ಟಡ ಉದ್ಘಾಟನೆ

ಲೋಕಬಂಧು ನ್ಯೂಸ್, ಉಡುಪಿ
ಕಿನ್ನಿಮೂಲ್ಕಿಯ ವೇಗಸ್ ಟೌನ್ ಶಿಪ್ 4ನೇ ಅಡ್ಡರಸ್ತೆಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾದ ಉಡುಪಿ ನೇತ್ರಜ್ಯೋತಿ ಕಾಲೇಜು ಕಟ್ಟಡದ ಉದ್ಘಾಟನೆ ನ. 8ರಂದು ನಡೆಯಲಿದೆ.ಕಾಲೇಜು 4 ಮಹಡಿ ಹೊಂದಿದ್ದು ಸುಸಜ್ಜಿತ ಪ್ರಯೋಗಾಲಯ, ವಿಶಾಲವಾದ ಡಿಜಿಟಲ್ ತರಗತಿ ಕೊಠಡಿ, ವಿಶಾಲವಾದ ಗ್ರಂಥಾಲಯ ಹೊಂದಿದೆ.


ವಿಸ್ತಾರಗೊಂಡ ವೈದ್ಯಕೀಯ ಕ್ಷೇತ್ರ
ದೇಶದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನ ಮಾನವೀಯ ಸ್ಪರ್ಷವಿರುವ ವೈದ್ಯಕೀಯ ಸೇವೆ ಆಗಿರಲಿ ಎಂಬ ಕನಸನ್ನು ಹೊಂದಿರುತ್ತಾರೆ. ಆದರೆ ಅವರಿಗೆ ಆ ಕನಸನ್ನು ನನಸು ಮಾಡಿಕೊಳ್ಳಲು ಇರುವ  ಸುಲಭ ಮತ್ತು ವಿಫುಲ ಅವಕಾಶಗಳ ಬಗ್ಗೆ ಸರಿಯಾದ ತಿಳುವಳಿಕೆ ಇರುವುದಿಲ್ಲ. ವೈದ್ಯಕೀಯ ಸೇವಾಕರ್ತರೆಂದರೆ ವೈದ್ಯರು ಮತ್ತು ದಾದಿಯರ ಚಿತ್ರಣ ನಮ್ಮ  ಕಣ್ಣ ಮುಂದೆ ಬರುವುದು ಸಹಜ. ಆದರೆ, ಇಂದು ವೈದ್ಯಕೀಯ ಸೇವಾ ಕಾರ್ಯಕ್ಷೇತ್ರವು ವಿಸ್ತಾರಗೊಂಡಿದ್ದು ಮಾತ್ರವಲ್ಲದೇ ನಿರೀಕ್ಷೆಗೂ ಮೀರಿ ಬೆಳೆಯುತ್ತಿದೆ.


ಅಪ್ಟೋಮೆಟಿ,್ರ ಆಪರೇಷನ್ ಥಿಯೇಟರ್ ಟೆಕ್ನೀಷಿಯನ್, ಲ್ಯಾಬ್ ಟೆಕ್ನೇಷಿಯನ್, ಮೆಡಿಕಲ್ ರೆಕಾರ್ಡ್, ಡಯಾಲಿಸೀಸ್ ಟೆಕ್ನೀಷಿಯನ್, ಅನೆಸ್ತೇಷಿಯಾ ಟೆಕ್ನೀಷಿಯನ್, ಮೆಡಿಕಲ್ ಇಮೇಜಿಂಗ್ ಟೆಕ್ನೇಷಿಯನ್ ಮುಂತಾದ ತಂತ್ರಜ್ಞರು ವೈದ್ಯಕೀಯ ಸೇವಾ ತಂಡದ ಭಾಗವಾಗಿದ್ದಾರೆ. ಇಂಥ ತಂತ್ರಜ್ಞರಾಗಿ ವೃತ್ತಿ ನಿರತರಾಗಲು ಮೂಲ ಶಿಕ್ಷಣ ಅರ್ಹತೆಯಾಗಿ ಎಸ್.ಎಸ್.ಎಲ್.ಸಿ.ಯೇ ಸಾಕಾಗುತ್ತದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇಂಥ ಹಲವಾರು ಕೋರ್ಸ್ ಗಳು ಉಡುಪಿಯ ಪ್ರತಿಷ್ಠಿತ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿದೆ.


ಸಾಮಾಜಿಕ ಸೇವೆಯಲ್ಲಿ
2006ರಲ್ಲಿ ನೇತ್ರ ಜ್ಯೋತಿ ಚಾರೀಬಲ್ ಟ್ರಸ್ಟ್ ನೋಂದಣಿಯಾಗಿದ್ದು, ಖ್ಯಾತ ನೇತ್ರ ತಜ್ಞ ಡಾ. ಕೃಷ್ಣ ಪ್ರಸಾದ್ ಕೂಡ್ಲು ಸ್ಥಾಪಕ ಅಧ್ಯಕ್ಷರಾಗಿ, ರಘುರಾಮ್ ರಾವ್ ಟ್ರಸ್ಟಿಗಳಾಗಿದ್ದಾರೆ.ಟ್ರಸ್ಟ್ ವತಿಯಿಂದ ಅನೇಕ ಸಮಾಜಮಖಿ ಕಾರ್ಯಗಳನ್ನು ರಾಜ್ಯದ ಅನೇಕ ಕಡೆ ಮಾಡುತ್ತಾ ಬಂದಿದೆ. ಸುಮಾರು 15 ಸಾವಿರಕ್ಕೂ ಹೆಚ್ಚು ಉಚಿತ ನೇತ್ರ ಶಿಬಿರಗಳನ್ನು ಈವರೆಗೆ ಆಯೋಜಿಸುವ ಮೂಲಕ ಜನರ ಜೀವನದಲ್ಲಿ ಬೆಳಕನ್ನು ನೀಡಲಾಗಿದೆ.


2016ರಲ್ಲಿ ಆರಂಭ
ಆ ದಿನಗಳಲ್ಲಿ ದೇಶದಾದ್ಯಂತ ಪ್ಯಾರಾಮೆಡಿಕಲ್ ಓದಿದ ಸಿಬ್ಬಂದಿಗಳ ಕೊರತೆ ಇದ್ದು ಅದನ್ನು ಸರಿದೂಗಿಸುವ ಪ್ರಯತ್ನವಾಗಿ 2016ರಲ್ಲಿ ನೇತ್ರಜ್ಯೋತಿ ಪ್ಯಾರಾಮೆಡಿಕಲ್ ಮತ್ತು ಅಲೈಡ್ ಹೆಲ್ತ್ ಸೈನ್ಸ್ ಕಾಲೇಜನ್ನು  ಉಡುಪಿಯಲ್ಲಿ ಪ್ರಾರಂಭಿಸಲಾಯಿತು.


ನಿರ್ದೇಶಕಿ ರಶ್ಮೀ ಕೃಷ್ಣ ಪ್ರಸಾದ್ ಅವರ ಸಮರ್ಥ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಈ ಸಂಸ್ಥೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಸಂಸ್ಥೆಯ ನೀತಿ ನಿಯಮಾವಳಿಗಳಲ್ಲಿ ರಾಜೀ ಮಾಡಿಕೊಳ್ಳದ ನಿಲುವಿನಂದಾಗಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ರಾಜ್ಯದಲ್ಲಿಯೇ ಅತೀ ಹೆಚ್ಚಿನ 15 ರ್ಯಾಂಕುಗಳು ಬಂದಿವೆ.


ಕಾಲೇಜಿನಲ್ಲಿ ನಿರಂತರವಾಗಿ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆ, ಮೃದು ಕೌಶಲ್ಯ ಚಟುವಟಿಕೆಗಳಿಗೆ ವಿಶೇಷ ಅವಕಾಶ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗೆ ಕಾರಣವಾಗಿದೆ. ದೂರದ ಊರುಗಳಿಂದ ಶಿಕ್ಷಣ ಪಡೆಯಲು ಬರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ನಿಲಯಗಳ ವ್ಯವಸ್ಥೆ ಇದೆ.


ಪಿ.ಯು.ಸಿ.ಯಲ್ಲಿ ವಿಜ್ಞಾನ ವಿಷಯ ಅಧ್ಯಯನ ಮಾಡಿದವರಿಗೆ ಬಿ.ಎಸ್.ಸಿ. ಪದವಿಯಲ್ಲಿ ಅಪ್ಟೋಮೆಟ್ರಿ, ಅನಸ್ತೇಷಿಯಾ ಮತ್ತು ಆಪರೇಷನ್ ಥೀಯೇಟರ್ ಟೆಕ್ನಾಲಜಿ, ಮೆಡಿಕಲ್ ಲ್ಯಾಬೋರೇಟರಿ ಟೆಕ್ನಾಲಜಿ,ಬ್ಯಾಚುಲರ್ ಇನ್ ಪಬ್ಲಿಕ್ ಹೆಲ್ತ್ (ಕಾಮರ್ಸ್, ಆರ್ಟ್ಸ್, ಸೈನ್ಸ್ ವಿದ್ಯಾರ್ಥಿಗಳಿಗೆ), ಬ್ಯಾಚುಲರ್ ಆಫ್ ಹಾಸ್ಪಿಟಲ್ ಆಡ್ಮಿನಿಷ್ಟ್ರೇಶನ್ (ಕಾಮರ್ಸ್, ಸೈನ್ಸ್, ಕಲಾ ವಿದ್ಯಾರ್ಥಿಗಳಿಗೆ) ಕೋರ್ಸ್ ಗಳು ಲಭ್ಯವಿದೆ.


ಫಿಸಿಯೋಥೆರಪಿ ಕಾಲೇಜಿಗೆ ಅನುಮತಿ
2024- 25ನೇ ಶೈಕ್ಷಣಿಕ ಸಾಲಿನಿಂದ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಂಜೂರಾತಿಯೊಂದಿಗೆ ಹೊಸದಾಗಿ ಫಿಸಿಯೋಥೆರಪಿ ಕಾಲೇಜು ತೆರೆಯಲು ಸರಕಾರದಿಂದ ಅನುಮತಿ ಸಿಕ್ಕಿದೆ. ಆದ್ದರಿಂದ ಈ ಶೈಕ್ಷಣಿಕ ವರ್ಷದಿಂದಲೇ ಬಿ.ಪಿ.ಟಿ. ಕೋರ್ಸ್ ಪ್ರಾರಂಭಿಸಿದ್ದು, ಹೆಚ್ಚಿನ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು.


ವೈದ್ಯಕೀಯ ರಂಗ ಸದಾ ಬೇಡಿಕೆಯಲ್ಲಿರುವ ಕ್ಷೇತ್ರವಾಗಿದ್ದು ಈ ಎಲ್ಲಾ ಆರೆವೈದ್ಯಕೀಯ, ಪದವಿ ಕೋರ್ಸುಗಳನ್ನು ಮುಗಿಸಿದವರಿಗೆ ಉದ್ಯೋಗಾವಕಾಶ ಸದಾ ತೆರೆದುಕೊಂಡಿದೆ.


ನೇತ್ರಜ್ಯೋತಿ ಕಾಲೇಜಿನಲ್ಲಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ಆರೋಗ್ಯ ಸಂಸ್ಥೆಗಳಲ್ಲಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳು, ವಿವಿಧ ಕಂಪೆನಿಗಳು, ಸರಕಾರದ ಆರೋಗ್ಯ ವಿಭಾಗಗಳಲ್ಲಿ ಮತ್ತು ವಿದೇಶಗಳಲ್ಲಿ ವೃತ್ತಿ ಜೀವನ ಮಾಡುತ್ತಿದ್ದು ಆ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.


ಭವಿಷ್ಯದ ಶಿಕ್ಷಣಕ್ಕಾಗಿ ಯೋಚಿಸುತ್ತಿರುವ ವಿದ್ಯಾರ್ಥಿಗಳು ನೇತ್ರಜ್ಯೋತಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಮುಂದುವರಿಸಿದರೆ ಅವರ ವೃತ್ತಿ ಜೀವನ ಉಜ್ವಲವಾಗಲಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article