
ಪರ್ಕಳದಲ್ಲಿ ಬೆಳಗಿತು ಬೃಹತ್ ದೀಪ
Saturday, November 2, 2024
ಲೋಕಬಂಧು ನ್ಯೂಸ್, ಉಡುಪಿ
ಪರ್ಕಳ ಸ್ವಾಗತ ಫ್ರೆಂಡ್ಸ್ ವತಿಯಿಂದ ದೀಪಾವಳಿ ಸಂಭ್ರಮಾಚರಣೆಗೆ ಈ ಬಾರಿ ಕಾರ್ಕಳದ ಸಾಣೂರುನಲ್ಲಿರುವ ಪಾಟ್ ಫ್ಯಾಕ್ಟರಿಯಲ್ಲಿ ದೀಪಾವಳಿಗೆಂದೇ ವಿಶೇಷವಾಗಿ ತಯಾರಿಸಲಾದ ಸುಮಾರು 15 ಲೀಟರ್ ಎಣ್ಣೆ ತುಂಬಿಸಬಹುದಾದ ಆವೆಮಣ್ಣಿನಿಂದ ತಯಾರಿಸಲಾದ ಬೃಹತ್ ದೀಪವನ್ನು ಕಾಂಗ್ರೆಸ್ ಮುಖಂಡ ಉದ್ಯಮಿ ಪ್ರಸಾದ್ ರಾಜ್ ಕಾಂಚನ್ ಬೆಳಗಿದರು.
ಈ ಬಾರಿಯ ಜಿಲ್ಲಾ ಮಟ್ಟದ ರಾಜ್ಯೋತ್ಸವ ಸನ್ಮಾನಕ್ಕೆ ಭಾಜನರಾದ ಕಟಪಾಡಿ ಮಹೇಶ್ ಶೆಣೈ, ವಕೀಲ ರಾಜಶೇಖರ ಮತ್ತು ಪಿ. ಶ್ಯಾಮರಾವ್ ಅವರನ್ನು ಗೌರವಿಸಲಾಯಿತು.
ಸ್ವಾಗತ ಫ್ರೆಂಡ್ಸ್ ಅಧ್ಯಕ್ಷ ಪಿ. ಮೋಹನದಾಸ್ ನಾಯಕ್, ಕಾರ್ಯಕ್ರಮ ಸಂಘಟಕ ಗಣೇಶ್ ರಾಜ್ ಸರಳಬೆಟ್ಟು, ಉಪೇಂದ್ರ ನಾಯ್ಕ್, ದೇವೇಂದ್ರ ನಾಯ್ಕ್, ಉಷಾ ನಾಯಕ್, ಉಮೇಶ್ ಮಣಿಪಾಲ, ಶೆಟ್ಟಿಬೆಟ್ಟು ಸರಕಾರಿ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯಿನಿ ಶ್ರೀದೇವಿ, ದೇವಿಪ್ರಸಾದ್ ಆಚಾರ್ಯ, ಜಯದೀಪ ನಾಯಕ್, ಜಗದೀಶ್, ಚೇತನ್ ಕುಡ್ವ, ಸುಧೀರ್ ಶೆಟ್ಟಿ ಹಿರಿಯಡ್ಕ, ಸುಬ್ರಹ್ಮಣ್ಯ ಪಾಟೀಲ್, ವೆಂಕಟೇಶ ಶೆಟ್ಟಿಗಾರ್, ಪ್ರಕಾಶ್ ಭಟ್ ಹೆರ್ಗ ಮೊದಲಾದವರಿದ್ದರು.
ಗಾಯಕರಾದ ಉಮೇಶ್ ಮಣಿಪಾಲ ಮತ್ತು ಸುಪ್ರೀತಾ ಮಣಿಪಾಲ ಅವರಿಂದ ಕನ್ನಡ ಗೀತ ಗಾಯನ ನಡೆಯಿತು.
ನಂತರ ಸಿಹಿತಿಂಡಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.