-->
ಸಚಿವ ಜಮೀರ್ ಜಿಲ್ಲೆಗೆ ಕಾಲಿಟ್ಟರೆ ಚಪ್ಪಲಿ ಸೇವೆ

ಸಚಿವ ಜಮೀರ್ ಜಿಲ್ಲೆಗೆ ಕಾಲಿಟ್ಟರೆ ಚಪ್ಪಲಿ ಸೇವೆ

ಲೋಕಬಂಧು ನ್ಯೂಸ್, ಬಂಟ್ವಾಳ
ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆಯಂತೆ ರೈತರ, ಶ್ಮಶಾನ, ಮಠದ ಆಸ್ತಿಯನ್ನು ವಕ್ಫ್ ಹೆಸರಿನಲ್ಲಿ ಕಬಳಿಸಲು ಸಂಚು ರೂಪಿಸಿ ನೋಟಿಸ್ ಜಾರಿಗೊಳಿಸುತ್ತಿರುವ ರಾಜ್ಯದ ವಕ್ಫ್‌ ಸಚಿವ ಜಮೀರ್ ಅಹ್ಮದ್ ದ.ಕ. ಜಿಲ್ಲೆಗೆ ಕಾಲಿಟ್ಟರೆ "ಚಪ್ಪಲಿ ಸೇವೆ" ಮಾಡಲು ಹಿಂಜರಿಯುವುದಿಲ್ಲ ಎಂದು ಬಿಜೆಪಿ ಯುವ ನೇತಾರ ವಿಕಾಸ್ ಪುತ್ತೂರು ಗುಡುಗಿದ್ದಾರೆ.ಇಲ್ಲಿನ ಬಿ.ಸಿ.ರೋಡ್ ಮೇಲ್ಸೇತುವೆ ಅಡಿಭಾಗದಲ್ಲಿ ಬಿಜೆಪಿ ಬಂಟ್ವಾಳ ಮಂಡಲ ವತಿಯಿಂದ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ, ಲ್ಯಾಂಡ್ ಜಿಹಾದ್ ಹಾಗೂ ವಕ್ಫ್‌ ಅಕ್ರಮ ಖಂಡಿಸಿ ನ.4ರಂದು ನಡೆದ ಪ್ರತಿಭನೆಯಲ್ಲಿ ಮಾತನಾಡಿದರು.


ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಹಿಂದೂಗಳ ಪರ ಕೆಲಸ ಮಾಡಿಲ್ಲ. ಹುಬ್ಬಳ್ಳಿ ಠಾಣೆಗೆ ಬೆಂಕಿ ಹಚ್ಚಲು ಮುಂದಾದ ಮತ್ತು ಪೊಲೀಸರ ಮೇಲೆ ಕಲ್ಲು ತೂರಿ ದಾಂಧಲೆ ನಡೆಸಿರುವ ಆರೋಪಿಗಳಿಗೆ ಹಾಗೂ ಭಯೋತ್ಪದಕ ಕೃತ್ಯದಲ್ಲಿ ತೊಡಗಿಸಿದವರಿಗೆ ಸಿದ್ದಾರಾಮಯ್ಯ ಸಂಪುಟ ಕ್ಲೀನ್‌ ಚಿಟ್ ನೀಡಿದೆ ಎಂದು ವಿಕಾಸ್ ಪುತ್ತೂರು ಆಕ್ರೋಶ ವ್ಯಕ್ತಪಡಿಸಿದರು.

Ads on article

Advertise in articles 1

advertising articles 2

Advertise under the article