-->
ವಕ್ಫ್ ಆಸ್ತಿ ರಾಷ್ಟ್ರೀಕರಣಗೊಳಿಸಿ

ವಕ್ಫ್ ಆಸ್ತಿ ರಾಷ್ಟ್ರೀಕರಣಗೊಳಿಸಿ

ಲೋಕಬಂಧು ನ್ಯೂಸ್, ವಿಜಯಪುರ
ವಕ್ಫ್ ಬೋರ್ಡ್‌ ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಪತ್ರ ಬರೆದಿದ್ದಾರೆ.ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಂಚಿಕೊಂಡಿರುವ ಅವರು, ವಕ್ಫ್ ಮಂಡಳಿ ದೇಶಾದ್ಯಂತ ರೈತರು, ದೇವಸ್ಥಾನಗಳು, ಟ್ರಸ್ಟ್‌ಗಳು, ಮಠಗಳ ಜಮೀನುಗಳ ಮೇಲೆ ಹಕ್ಕು ಸಾಧಿಸುವ ಪ್ರಯತ್ನ ನಡೆಸಿದೆ.


ಈ ಅನಿಯಂತ್ರಿತ ಸ್ಪಷ್ಟ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸುವಂತೆ ಮನವಿ ಮಾಡಿದ್ದಾರೆ.


ದೇಶದ ಸಂಪನ್ಮೂಲ ಯಾವುದೇ ನಿಶ್ಚಿತ ಕೋಮಿಗೆ ಸೇರುವುದು ಜಾತ್ಯತೀತೆಗೆ ವಿರುದ್ಧ. ಹಾಗಾಗಿ ವಕ್ಫ್ ಆಸ್ತಿ ರಾಷ್ಟ್ರೀಕರಣಗೊಳಿಸಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿರುವುದಾಗಿ ಶಾಸಕ ಯತ್ನಾಳ್ ಹೇಳಿದ್ದಾರೆ.


ವಕ್ಫ್ ಬೋರ್ಡ್‌ನಿಂದಾಗಿ ಜಮೀನು ಮಾಲಿಕರು, ರೈತರಿಗೆ ತೊಂದರೆಯಾಗುತ್ತಿದೆ. ರೈತರು, ಜಮೀನು ಮಾಲಿಕರು ಸೇರಿದಂತೆ ಧಾರ್ಮಿಕ ಸಂಸ್ಥೆ, ಮಠ ಮಾನ್ಯಗಳ ಜಮೀನನ್ನು ವಕ್ಫ್ ಆಕ್ರಮಿಸಿಕೊಳ್ಳುತ್ತಿದೆ.


ವಕ್ಫ್ ಕಾನೂನು ಅಸಮಾನತೆ, ಕ್ರೂರತೆಯನ್ನು ಒಳಗೊಂಡಿದೆ. ವಕ್ಫ್ ಬೋರ್ಡ್‌ಗೆ ಅನಿಯಂತ್ರಿತ, ಅಪರಿಮಿತ ಅಧಿಕಾರ ನೀಡಲಾಗಿದೆ ಎಂದು ಪತ್ರದಲ್ಲಿ ಶಾಸಕ ಯತ್ನಾಳ್ ಉಲ್ಲೇಖಿಸಿದ್ದಾರೆ.

Ads on article

Advertise in articles 1

advertising articles 2

Advertise under the article