ವಕ್ಫ್ ಆಸ್ತಿ ಅಲ್ಲಾನ ಆಸ್ತಿ
Sunday, November 3, 2024
ಲೋಕಬಂಧು ನ್ಯೂಸ್, ಬೆಂಗಳೂರು
ವಕ್ಫ್ ಆಸ್ತಿಯನ್ನು ಅಲ್ಲಾನ ಆಸ್ತಿ ಎನ್ನುತ್ತೇವೆ ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಸ್ ಆಸ್ತಿ ದಾನಿಗಳು ದಾನ ಮಾಡಿರುವ ಆಸ್ತಿ. ಸರ್ಕಾರ ಕೊಟ್ಟಿರುವ ಆಸ್ತಿ ಅಲ್ಲ.
ಬಿಜೆಪಿಯವರಿಗೆ ಮಾತನಾಡಲು ಯಾವುದೇ ವಿಷಯಗಳಿಲ್ಲ. ಇಷ್ಟು ದಿನ ಮುಡಾದ ಬಗ್ಗೆ ಮಾತನಾಡಿದರು. ಅದರಲ್ಲಿ ಏನೂ ಎಲ್ಲ ಎಂದು ಗೊತ್ತಾದ ಮೇಲೆ ಈಗ ವಕ್ಫ್ ವಿಚಾರ ಹಿಡಿದುಕೊಂಡಿದ್ದಾರೆ.
ಕರ್ನಾಟಕದಲ್ಲಿ 3 ಕಡೆ ಉಪಚುನಾವಣೆ ನಡೆಯಲಿದೆ. ಆದ್ದರಿಂದ ರಾಜಕೀಯ ಗಿಮಿಕ್‌ಗೋಸ್ಕರ ಸುಮ್ಮನೇ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಚಿವ ಜಮೀರ್ ಹೇಳಿದರು.