ಇಂಡೋನೇಷ್ಯಾದಲ್ಲಿ ಭುಗಿಲೆದ್ದ ಜ್ವಾಲಾಮುಖಿ
Monday, November 4, 2024
ಲೋಕಬಂಧು ನ್ಯೂಸ್, ಮೌಮೆರೆ
ಇಂಡೋನೇಷ್ಯಾದ ಫ್ಲೋರ್ಸ್ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಹಲವು ಮನೆಗಳು ಭಸ್ಮವಾಗಿವೆ. ಘಟನೆಯಿಂದ 10 ಮಂದಿ ಮೃತಪಟ್ಟಿದ್ದಾರೆ ಎಂದು ಇಂಡೋನೇಷ್ಯಾದ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.ಕಳೆದೊಂದು ವಾರದಿಂದ ಮೌಂಟ್ ಲೆವೊಟೊಬಿ ಲಕಿ ಲಕಿ ಜ್ವಾಲಾಮುಖಿ ಭುಗಿಲೆದ್ದಿದೆ. ಆ ಬಗ್ಗೆ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದ್ದು, ಅಪಾಯ ವಲಯವನ್ನು ವಿಸ್ತರಿಸಲಾಗಿದೆ.
ದೇಶದಲ್ಲಿ ಜ್ವಾಲಾಮುಖಿಯ ಅಲರ್ಟ್ ಘೋಷಿಸಿಲಾಗಿದೆ. ಮಧ್ಯರಾತ್ರಿಯ ನಂತರ ಆಗಾಗ ಸ್ಫೋಟ ಸಂಭವಿಸಿರುವುದರಿಂದ ಅಪಾಯದ ವಲಯವನ್ನು 7 ಕಿ.ಮೀ.ಗೆ ವಿಸ್ತರಿಸಲಾಗಿದೆ.