-->
ವಕ್ಫ್ ವಿವಾದ: ವಿಸ್ತೃತ ವರದಿ ಸ್ಪೀಕರ್ ಗೆ ನೀಡುವೆ

ವಕ್ಫ್ ವಿವಾದ: ವಿಸ್ತೃತ ವರದಿ ಸ್ಪೀಕರ್ ಗೆ ನೀಡುವೆ

ಲೋಕಬಂಧು ನ್ಯೂಸ್, ಹುಬ್ಬಳ್ಳಿ
ವಕ್ಫ್ ಬೋರ್ಡ್ ಆಸ್ತಿ ಕಬಳಿಸುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕರ್ನಾಟಕದ ಜನರ ಸಮಸ್ಯೆಗಳನ್ನು ಆಲಿಸಿ ಅದರ ವಿಸ್ತೃತ ವರದಿ ಸಿದ್ಧಪಡಿಸಿ ಸ್ಪೀಕರ್ ಗೆ ನೀಡಲಾಗುವುದು ಎಂದು ವಕ್ಫ್ ಬೋರ್ಡ್ ಸಂಸದೀಯ ಜಂಟಿ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ತಿಳಿಸಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ತೇಜಸ್ವಿ ಸೂರ್ಯ ಅವರು ಕರ್ನಾಟಕದ ರೈತರು ಹಾಗೂ ಜನಸಾಮಾನ್ಯರ ಆಸ್ತಿ ಕಬಳಿಕೆ ಮಾಡಿರುವ ಮಾಹಿತಿ ನೀಡಿದ್ದಾರೆ. ಆದ್ದರಿಂದ ಅಹವಾಲು ಸ್ವೀಕರಿಸಲು ಬಂದಿದ್ದೇನೆ ಎಂದರು.


ಉತ್ತರ ಕರ್ನಾಟಕ ಭಾಗದ ಸುಮಾರು 50- 60 ವರ್ಷಗಳಿಂದ ಉಳುಮೆ‌ ಮಾಡಿದ ಜಮೀನು, ಐತಿಹಾಸಿಕ ದೇವಸ್ಥಾನಗಳನ್ನು ಕಬಳಿಸಲಾಗಿದೆ‌ ಎನ್ನಲಾಗುತ್ತಿದೆ.


ಆದ್ದರಿಂದ ಹುಬ್ಬಳ್ಳಿ, ವಿಜಯಪುರ, ಬೀದರ್ ರೈತರು ಹಾಗೂ ಜನರ ಅಹವಾಲು ಸ್ವೀಕರಿಸುತ್ತೇನೆ.


ಸದ್ಯ ಹುಬ್ಬಳ್ಳಿಯಲ್ಲಿ ಅದ್ವೈತ್ ಪರಿಷತ್ ಉತ್ತರ ಕರ್ನಾಟಕ ಹಾಗೂ ರತ್ನ ಭಾರತ ರೈತ ಸಮಾಜದವರು ಮನವಿ ಸಲ್ಲಿಸಿದ್ದು, ಅದನ್ನು ಪರಿಗಣಿಸಲಾಗುವುದು ಎಂದರು.

Ads on article

Advertise in articles 1

advertising articles 2

Advertise under the article