-->
ಬೋಟ್'ನಲ್ಲಿ ಅಗ್ನಿ ದುರಂತ: 15 ಲಕ್ಷ ನಷ್ಟ

ಬೋಟ್'ನಲ್ಲಿ ಅಗ್ನಿ ದುರಂತ: 15 ಲಕ್ಷ ನಷ್ಟ

ಲೋಕಬಂಧು ನ್ಯೂಸ್
ಉಡುಪಿ, ಫೆ.21: ಮಲ್ಪೆ ಸಮೀಪದ ಬಾಪುತೋಟ ಬಳಿಯ ಮೀನುಗಾರಿಕೆ ಬಂದರಿನ ಸೇತುವೆ ಪಕ್ಕದ ದಕ್ಕೆಯಲ್ಲಿ ಲಂಗರು ಹಾಕಿದ್ದ ಮೀನುಗಾರಿಕೆ ಬೋಟಿನಲ್ಲಿ ಗುರುವಾರ ತಡರಾತ್ರಿ ಬೆಂಕಿ ಕಾಣಿಸಿಕೊಂಡು, ಬೋಟು ಸಂಪೂರ್ಣ ಸುಟ್ಟುಹೋದ ಘಟನೆ ಸಂಭವಿಸಿದೆ.ಮಲ್ಪೆ ಜನಾರ್ದನ ಟಿ. ಕಾಂಚನ್ ಎಂಬವರಿಗೆ ಸೇರಿದ 'ರವಿಪ್ರಕಾಶ್' ಹೆಸರಿನ ಸಣ್ಣ ಟ್ರಾಲ್ (ಫಿಶಿಂಗ್) ಬೋಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸ್ಥಳೀಯ ದೋಣಿಯವರು ಗಮನಿಸಿ ಸಕಾಲದಲ್ಲಿ ಮಾಹಿತಿ ನೀಡಿದ್ದರಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.


ಆ ಬೋಟಿನ ಮೀನುಗಾರರು ಮೀನುಗಾರಿಕೆ ಮುಗಿಸಿಬಂದು ಬೋಟನ್ನು ಬಾಪುತೋಟ ಬಳಿಯ ದಕ್ಕೆಯಲ್ಲಿ ನಿಲ್ಲಿಸಿದ್ದರು.


ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಸಕಾಲದಲ್ಲಿ ಬೆಂಕಿ ನಂದಿಸಿದರು.


ಬೆಂಕಿ ಕಾಣಿಸಿಕೊಂಡ ಬೋಟಿನ ಸುತ್ತ ಸುಮಾರು 25ರಿಂದ 30 ಬೋಟುಗಳು ನಿಂತಿದ್ದರೂ ಸಮುದ್ರದ ನೀರಿನ ಉಬ್ಬರದಿಂದಾಗಿ ಇತರ ಯಾವುದೇ ಬೋಟುಗಳಿಗೆ ಬೆಂಕಿ ತಾಗಲಿಲ್ಲ ಎನ್ನಲಾಗಿದೆ.


ಬೆಂಕಿಗಾಹುತಿಯಾದ ಬೋಟಿನಲ್ಲಿ ಬಲೆ, 200 ಲೀ. ಡಿಸೇಲ್ ಜಿಪಿಎಸ್, ಫಿತ್ ಫ್ರೆಂಡರ್ ಲೈಪ್ ಜಾಕೆಟ್, ವಾಟರ್ ಟ್ಯಾಂಕರ್ ಇತ್ಯಾದಿ ಇದ್ದು, ಸುಮಾರು 15 ಲಕ್ಷ ರೂ.ಗಳಷ್ಟು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Ads on article

Advertise in articles 1

advertising articles 2

Advertise under the article