ಫೆ.27: ವಿದ್ವಾಂಸರ ಸಮಾವೇಶ
Sunday, February 23, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.22: ದಿ.ಡಾ.ಪಾದೂರು ಗುರುರಾಜ ಭಟ್ ಜನ್ಮಶತಾಬ್ದಿ ಅಂಗವಾಗಿ ಡಾ.ಪಾದೂರು ಗುರುರಾಜ ಭಟ್ ಸ್ಮಾರಕ ಟ್ರಸ್ಟ್ ವತಿಯಿಂದ ಫೆ.27ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ಭಾರತೀಯ ಇತಿಹಾಸ ಮತ್ತು ವಿಶೇಷವಾಗಿ ದೇವಾಲಯಗಳು, ದೇವತಾಮೂರ್ತಿಗಳ ಕುರಿತಾದ ಸಂಶೋಧನೆಯಲ್ಲಿ ಇದುವರೆಗೆ ಸಾಗಿಬಂದ ವಿವರಗಳನ್ನು ಕೇಂದ್ರಿಕರಿಸಿ ಸಂಶೋಧನೆ ಮತ್ತು ಬರಹಗಳಿಂದ ಪ್ರಸಿದ್ಧರಾದ ವಿದ್ವಾಂಸರ ಸಮಾವೇಶವನ್ನು ನಗರದ ಟೌನ್'ಹಾಲ್'ನಲ್ಲಿ ಏರ್ಪಡಿಸಲಾಗಿದೆ ಎಂದು ಪಾದೂರು ಗುರುರಾಜ್ ಭಟ್ ಪುತ್ರ ವಿಶ್ವನಾಥ್ ಪಾದೂರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಭಾರತೀಯ ಪ್ರಾಚೀನ ದೇವಾಲಯಗಳ ಪುನರ್ ನಿರ್ಮಾಣ ಬಗ್ಗೆ ಇತಿಹಾಸ ತಜ್ಞ ಕೆ.ಕೆ.ಮಹಮ್ಮದ್, ದೇವಾಲಯಗಳ ವಾಸ್ತುವಿನ್ಯಾಸ, ರಚನೆ ಮತ್ತು ಅಲಂಕಾರಿಕ ಕೆತ್ತನೆ ಬಗ್ಗೆ ಪ್ರಾಚೀನ ಭಾರತೀಯರ ನೈಪುಣ್ಯ ಕೌಶಲ್ಯ ಮತ್ತು ವಿಜ್ಞಾನ ಹಾಗು ಸೌಂದರ್ಯ ವಿಷಯದ ಬಗ್ಗೆ ಸುರೇಂದ್ರನಾಥ್ ಬೊಪ್ಪರಾಜು, ಇಂದಿನ ಭಾರತೀಯ ಇತಿಹಾಸದ ಪಠ್ಯ ಮುಚ್ಚಿಟ್ಟ ಸಾಂಸ್ಕೃತಿಕ ಆಧ್ಯಾತ್ಮಿಕ ಆಯಾಮಗಳು ಮತ್ತು ಪೂರ್ವನಿರ್ಧರಿತ ಪಠ್ಯಗಳಲ್ಲಿ ಅಸತ್ಯಗಳು ವಿಷಯದ ಬಗ್ಗೆ ವಿಕ್ರಂ ಸಂಪತ್ ಅಭಿಪ್ರಾಯ ಮಂಡಿಸಲಿದ್ದಾರೆ.
ಕಾರ್ಯಕ್ರಮದ ಬಳಿಕ ಇತಿಹಾಸಕಾರರೊಂದಿಗೆ ಸಂವಾದಕ್ಕೆ ಅವಕಾಶವಿದೆ.
ಇದೇ ವೇಳೆ ಶತಮಾನೋತ್ಸವ ಪುರಸ್ಕಾರವನ್ನು ಇತಿಹಾಸ ತಜ್ಞ ವಿಕ್ರಂ ಸಂಪತ್ ಅವರಿಗೆ ಪ್ರದಾನ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಗುರುರಾಜ ಭಟ್ ಪುತ್ರ ಪರಶುರಾಮ್ ಭಟ್, ರಘುಪತಿ ರಾವ್ ಇದ್ದರು.