ಕಲ್ಕುಡ ಕಲ್ಲುರ್ಟಿ ದೈವ ಪ್ರತಿಷ್ಠಾಪನೆ
Sunday, February 23, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.22: ದೊಡ್ಡಣಗುಡ್ಡೆ ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರದ ಪರಿವಾರ ದೈವ ಕಲ್ಕಡ ಕಲ್ಲುರ್ಟಿ ದೈವಗಳ ಪುನಃಪ್ರತಿಷ್ಠೆ ಕ್ಷೇತ್ರದ ನೂತನ ಗುಡಿಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ರಮಾನಂದ ಗುರೂಜಿ ಮಾರ್ಗದರ್ಶನದಲ್ಲಿ ಬಿ. ಗಣೇಶ್ ಭಟ್ ನೇತೃತ್ವದಲ್ಲಿ ನಡೆಯಿತು.ಆ ಪ್ರಯುಕ್ತ ಕ್ಷೇತ್ರದಲ್ಲಿ ಬೆಳಿಗ್ಗೆ ಆದ್ಯ ಗಣಪತಿ ಯಾಗ, ಪ್ರತಿಷ್ಠಾ ಪ್ರಧಾನ ಹೋಮ, ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಕಳಾಭಿವೃದ್ದಿ ಹೋಮ, ಶಿಖರ ಪ್ರತಿಷ್ಠೆ, ದೈವ ಪ್ರತಿಷ್ಠೆ ನೆರವೇರಿತು.
ಬ್ರಾಹ್ಮಣ- ಸುವಾಸಿನಿ ಆರಾಧನೆ, ದೈವ ದರ್ಶನ ಹಾಗೂ ಅನ್ನ ಸಂತರ್ಪಣೆ ನಡೆಯಿತು.ಪುನರ್ ಪ್ರತಿಷ್ಠೆಯ ಪರ್ವಕಾಲದಲ್ಲಿ ಆಯೋಜಿಸಲಾದ ದೈವ ದರ್ಶನದಲ್ಲಿ ಗತಕಾಲದ ಕ್ಷೇತ್ರ ಚರಿತ್ರೆಯನ್ನು ದೈವ ತನ್ನ ನುಡಿಯಲ್ಲಿ ಎಳೆ ಎಳೆಯಾಗಿ ತಿಳಿಸಿ, ಋಷಿಮುನಿಗಳು ಗೈದ ತಪಃಶಕ್ತಿಯಿಂದ ಪ್ರತಿಷ್ಠಾಪಿಸಿದ ದೇವಿ ಸನ್ನಿಧಾನ ಹಾಗೂ ಜ್ಞಾನಿಗಳು ಓಡಾಡಿದ ತಪೋಭೂಮಿ ಮತ್ತೆ ಚೈತನ್ಯ ಶಕ್ತಿ ಪಡೆದುಕೊಂಡು ಕ್ಷೇತ್ರ ನಿರ್ಮಾತೃ ಶ್ರೀ ರಮಾನಂದ ಗುರೂಜಿಯವರನ್ನು ಪರಿಪೂರ್ಣವಾಗಿ ಅನುಗ್ರಹಿಸಿ ಯಜ್ಞ ಯಾಗಾದಿಗಳು ದಾನ ಧರ್ಮಾದಿಗಳನ್ನು ಸಂಪನ್ನಗೊಳಿಸುತ್ತಿರುವುದಾಗಿ ಅಭಯ ವಾಕ್ಯದಿಂದ ನೆರೆದ ಭಕ್ತ ಸಮೂಹಕ್ಕೆ ಸಂತೃಪ್ತ ಭಾವ ನೀಡಿತು ಎಂದು ಕ್ಷೇತ್ರ ಉಸ್ತುವಾರಿ ಕುಸುಮ ನಾಗರಾಜ್ ತಿಳಿಸಿದ್ದಾರೆ.