.jpg)
ನಟಿ ಶಿಲ್ಪಾ ಶೆಟ್ಟಿ ಕಾಪು ಭೇಟಿ
Friday, February 28, 2025
ಲೋಕಬಂಧು ನ್ಯೂಸ್
ಕಾಪು, ಫೆ.28: ಸಮಗ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕುಂಭಾಭಿಷೇಕ ಮಹೋತ್ಸವದ ಸಡಗರದಲ್ಲಿರುವ ಕಾಪು ಶ್ರೀ ಹೊಸಮಾರಿಗುಡಿ ದೇವಳಕ್ಕೆ ಶುಕ್ರವಾರ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಆಗಮಿಸಿ ದೇವಿ ದರ್ಶನ ನಡೆದರು.
ಕ್ಷೇತ್ರದ ತಂತ್ರಿಗಳಾದ ಕುಮಾರಗುರು ತಂತ್ರಿ ಪ್ರಸಾದ ನೀಡಿದರು.
ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಶಾಸಕ ಗುರ್ಮೆ ಸುರೇಶ ಶೆಟ್ಟಿ ಮೊದಲಾದವರಿದ್ದರು.
ಬಳಿಕ ಪಡುಬಿದ್ರಿಯಲ್ಲಿ ನಡೆಯುತ್ತಿರುವ ತಮ್ಮ ಕುಟುಂಬದ ಢಕ್ಕೆಬಲಿ ಉತ್ಸವದಲ್ಲಿ ಭಾಗವಹಿಸಲು ತೆರಳಿದರು.