-->
ಅಧಿವೇಶನಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ

ಅಧಿವೇಶನಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ

ಲೋಕಬಂಧು ನ್ಯೂಸ್
ಉಡುಪಿ, ಫೆ.28: ಮುಂಬರುವ ವಿಧಾನಸಭೆ ಅಧಿವೇಶನಕ್ಕೂ ಮೊದಲು ಅಥವಾ ನಂತರ ಬಿಜೆಪಿ ರಾಜ್ಯಾಧ್ಯಕ್ಷರ ಘೋಷಣೆ ಆಗಬಹುದು. ಬಿಜೆಪಿ ಅಖಿಲ ಭಾರತ ಅಧ್ಯಕ್ಷರು ಅದನ್ನು ತೀರ್ಮಾನಿಸುತ್ತಾರೆ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದರು.ಶುಕ್ರವಾರ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.


ನಮ್ಮ ವಿಚಾರವನ್ನು ಕಾಂಗ್ರೆಸ್ ಕೇಳುವಂತೆ ಮಾಡುವ ಶಕ್ತಿ ನಮಗಿದೆ. ಅದನ್ನು ನಾವು ಪರಿಣಾಮಕಾರಿಯಾಗಿ ಮಾಡುತ್ತೇವೆ. ರಾಜಕೀಯ ಪಕ್ಷದೊಳಗೆ ಸಾಮಾನ್ಯವಾಗಿ ಸ್ವಲ್ಪ ಮಟ್ಟಿನ ಭಿನ್ನಮತ ಸಹಜ. ಅದು ಬಿಜೆಪಿಯಲ್ಲೂ ಇದೆ. ಆದರೆ, ಕಾಂಗ್ರೆಸ್‌ನಲ್ಲಿ ವಿಪರೀತ ಭಿನ್ನಮತ ಇದೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಹೊಡೆದಾಟ ಶುರುವಾಗಿದೆ.


ಡಿ.ಕೆ.ಶಿವಕುಮಾರ್ ಇಶಾ ಫೌಂಡೇಶನ್, ಮಹಾಕುಂಭಮೇಳಕ್ಕೆ ಯಾಕೆ ಹೋದರು ಎಂಬುದು ಎಲ್ಲರಿಗೂ ಗೊತ್ತಿದೆ. ಸಿದ್ದರಾಮಯ್ಯನವರಿಗೆ ಥ್ರೆಟ್ ಕೊಡಲು ಅವರು ಹೋಗಿದ್ದಾರೆ ಎಂದರು.


ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತೇವೆ, ರಾಜ್ಯಾದ್ಯಂತ ಹೋರಾಟ ರೂಪಿಸುತ್ತೇವೆ. ಡಿಕೆಶಿ ಸಾಫ್ಟ್  ಹಿಂದುತ್ವದಿಂದ ಯಾರಿಗೆ ಥ್ರೆಟ್ ಎನ್ನವುದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ ಎಂದರು.


ಡಿಕೆಶಿ ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾದು ನೋಡೋಣ. ಗೊತ್ತಿಲ್ಲ, ಡಿ.ಕೆ. ಶಿವಕುಮಾರ್ ಓರ್ವ ದೈವ ಭಕ್ತ ಎನ್ನುವುದನ್ನು ಒಪ್ಪುತ್ತೇನೆ. ಹಿಂದೂ ಧರ್ಮದಲ್ಲಿ ನಂಬಿಕೆ ಇರುವ ವ್ಯಕ್ತಿಯಾಗಿದ್ದು, ಮಹಾಕುಂಭದ ಬಗ್ಗೆ ಒಳ್ಳೆಯ ಮಾತು ಆಡಿದ್ದಾರೆ. ಸರಕಾರ ಚೆನ್ನಾಗಿ ವ್ಯವಸ್ಥೆ ಮಾಡಿದೆ ಎಂಬ ಸತ್ಯ ಹೇಳಿದ್ದಾರೆ.


ಆದರೆ, ಖರ್ಗೆ ಬಡತನ ಹೋಗುತ್ತದೆಯೇ ಎಂದು ಕೇಳಿದ್ದಾರೆ. 67 ಕೋಟಿ ಜನ ಪ್ರಯಾಗ್'ರಾಜ್ ಗೆ ಬಂದು ಹೋಗಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಖರ್ಗೆ ಅವರಿಗೆ ಅವರ ಪಕ್ಷದವರೇ ಉತ್ತರ ಕೊಟ್ಟಿದ್ದಾರೆ. ಅನೇಕ ಕಾಂಗ್ರೆಸಿಗರು ಹೋಗಿ ಬಂದಿದ್ದಾರೆ ಎಂದರು.

Ads on article

Advertise in articles 1

advertising articles 2

Advertise under the article