ಡಿಕೆಶಿ ಸತ್ಯ ಮಾತನಾಡಿದ್ದಾರೆ
Friday, February 28, 2025
ಲೋಕಬಂಧು ನ್ಯೂಸ್
ಉಡುಪಿ, ಫೆ.28: ಮಹಾಕುಂಭಮೇಳದಲ್ಲಿ ಭಾಗಿಯಾಗಿರುವ ಭಾರತೀಯರು ಮತ್ತು ವಿದೇಶೀಯರು ಪುಣ್ಯವಂತರು. ಹಿಂದುತ್ವದ ರಾಷ್ಟ್ರದ ಪರಿಕಲ್ಪನೆ ಇದ್ದವರು ಪುಣ್ಯಸ್ನಾನ ಮಾಡಿದ್ದಾರೆ. ಕಾಂಗ್ರೆಸ್‌ನ ಇತಿಹಾಸದಲ್ಲಿ ಸತ್ಯ ಮಾತನಾಡಿದ್ದು ಡಿಕೆಶಿ ಮಾತ್ರ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಹರ್ಷ ವ್ಯಕ್ತಪಡಿಸಿದ್ದಾರೆ.ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮದ ಪಾವಿತ್ರ್ಯತೆ, ಹಿಂದೂ ಧರ್ಮದ ವಿಚಾರದ ಬಗ್ಗೆ ಡಿಕೆಶಿ ಬಹಿರಂಗವಾಗಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಮತ ಬ್ಯಾಂಕಿಗೋಸ್ಕರ ಈವರೆಗೆ ಸುಳ್ಳನ್ನೇ ಮಾತನಾಡುತ್ತಾ ಬಂದಿತ್ತು.
ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರದ ಬಗ್ಗೆ ನಾವು ಹೆಚ್ಚು ಮಾತನಾಡುವುದಿಲ್ಲ ಈ ಬೆಳವಣಿಗೆ ದುಬಾರಿಯಾಗುತ್ತದೆಯೋ, ಸಹಕಾರಿಯಾಗುತ್ತದೆಯೋ ಎಂಬ ಚರ್ಚೆ ಮಾಡುವುದಿಲ್ಲ.
ಡಿಕೆಶಿ ಹೇಳಿಕೆಯನ್ನು ಸ್ವಾಗತಿಸುವುದಾಗಿ ಶಾಸಕ ಯಶಪಾಲ್ ಹೇಳಿದರು.