
ಮಹಾಗಣಪತ್ಯಥರ್ವಶೀರ್ಷ ಯಾಗ ಸಂಪನ್ನ
Friday, February 28, 2025
ಲೋಕಬಂಧು ನ್ಯೂಸ್
ಕಾಪು, ಫೆ.27: ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಳದಲ್ಲಿ ನಡೆಯುತ್ತಿರುವ ಪುನಃಪ್ರತಿಷ್ಠಾ ಬ್ರಹ್ಮಕುಂಭಾಭಿಷೇಕ ಪ್ರಯುಕ್ತ ಗುರುವಾರ ಕ್ಷೇತ್ರದ ತಂತ್ರಿಗಳಾದ ಕುಮಾರಗುರು ತಂತ್ರಿ ನೇತೃತ್ವದಲ್ಲಿ ಮಹಾಗಣಪತ್ಯಥರ್ವಶೀರ್ಷ ಮಹಾಯಾಗ ಸಹಿತ ವಿವಿಧ ಯಾಗಗಳು ನಡೆದವು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಪ್ರಕಾಶ ಶೆಟ್ಟಿ, ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕಾಪು ವಾಸುದೇವ ಶೆಟ್ಟಿ ಸೇರಿದಂತೆ ಪ್ರಮುಖರಿದ್ದರು.