.jpg)
ಡಲ್ಲಾಸ್ ಕೃಷ್ಣ ವೃಂದಾವನ ವಾರ್ಷಿಕೋತ್ಸವ
Friday, February 28, 2025
ಲೋಕಬಂಧು ನ್ಯೂಸ್, ಉಡುಪಿ
ವಿಶ್ವಾದ್ಯಂತ ಶ್ರೀ ಕೃಷ್ಣ ಭಕ್ತಿಯ ಶಾಶ್ವತ ಪ್ರಚಾರಕ್ಕಾಗಿ ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಮೆರಿಕದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ಮಹಾನಗರದಲ್ಲಿ ಸ್ಥಾಪಿಸಿರುವ ಪುತ್ತಿಗೆ ಮಠದ 6ನೇ ವಾರ್ಷಿಕೋತ್ಸವ ಶ್ರೀನಿವಾಸ ಕಲ್ಯಾಣ ಮಹೋತ್ಸವದ ಆಚರಣೆಯೊಂದಿಗೆ ವೈಭವದಿಂದ ಸಂಪನ್ನಗೊಂಡಿತು.
ವಾರ್ಷಿಕೋತ್ಸವದ ನಿಮಿತ್ತ 108 ಕಲಶಾಭಿಷೇಕ, ಮಹಾಪೂಜೆ, ಶ್ರೀನಿವಾಸ ಕಲ್ಯಾಣ ಮಹೋತ್ಸವ, ಅನ್ನ ಸಂತರ್ಪಣೆ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಂಗಪೂಜೆ, ಉತ್ಸವ ಇತ್ಯಾದಿಗಳು ಪ್ರಧಾನ ಅರ್ಚಕ ಕುಕ್ಕೆಹಳ್ಳಿ ವಾದಿರಾಜ ಭಟ್ ನೇತೃತ್ವದಲ್ಲಿ ಅನೇಕ ಋತ್ವಿಜರ ಸಹಕಾರದೊಂದಿಗೆ ಸಂಪನ್ನಗೊಂಡಿತು.
ಅಲ್ಲಿ ಉಡುಪಿ ಶ್ರೀಕೃಷ್ಣನ ಮೂರ್ತಿಯನ್ನು ಮುಖ್ಯಪ್ರಾಣ ಮತ್ತು ಗುರುರಾಯರ ಮೃತ್ತಿಕಾ ಬೃಂದಾವನದ ಜೊತೆಗೆ ಶ್ರೀಪಾದರು ಸ್ಥಾಪಿಸಿದ್ದಾರೆ.