ಮಾ.5: ಗುಂಡ್ಮಿಗೆ ಶೃಂಗೇರಿ ಶ್ರೀ
Tuesday, March 4, 2025
ಲೋಕಬಂಧು ನ್ಯೂಸ್
ಬ್ರಹ್ಮಾವರ: ಸಾಸ್ತಾನ ಗುಂಡ್ಮಿ ವೈದಿಕ ಆಶ್ರಮದಲ್ಲಿ ಬುಧವಾರ ನಡೆಯುವ ಸಮಗ್ರ ರುದ್ರೈಕಾದಶಿನೀ ಹೋಮದ ಪೂರ್ಣಾಹುತಿಯಲ್ಲಿ ಪಾಲ್ಗೊಳ್ಳಲು ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರು ಆಗಮಿಸುವರು.ಬೆಳಿಗ್ಗೆ 9.30 ಗಂಟೆಗೆ ಆಗಮಿಸುವ ಜಗದ್ಗುರುಗಳನ್ನು ಪೂರ್ಣಕುಂಭದೊಂದಿಗೆ ಬರಮಾಡಿಕೊಳ್ಳಲಾಗುವುದು. ಬಳಿಕ ಹೋಮ ಪೂರ್ಣಾಹುತಿಯಲ್ಲಿ ಭಾಗವಹಿಸಿ, ಆಶೀರ್ವಚನ ನೀಡುವರು.
ರಾತ್ರಿ ಶ್ರೀ ಶಾರದಾ ಚಂದ್ರಮೌಳೀಶ್ವರ ಪೂಜೆ ನೆರವೇರಿಸಿ, ತಂಗುವರು.
ಶ್ರೀಗಳ ಪಾದಪೂಜೆ, ಭಿಕ್ಷಾವಂದನೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ವೈದಿಕ ಆಶ್ರಮದ ಪ್ರಕಟಣೆ ತಿಳಿಸಿದೆ.