-->
ವಿವೇಕಾನಂದ ಯೋಗ ಕೇಂದ್ರದಿಂದ ಬೀಚ್ ಸ್ವಚ್ಛತೆ

ವಿವೇಕಾನಂದ ಯೋಗ ಕೇಂದ್ರದಿಂದ ಬೀಚ್ ಸ್ವಚ್ಛತೆ

ಲೋಕಬಂಧು ನ್ಯೂಸ್
ಉಡುಪಿ: ವಿವೇಕಾನಂದ ಯೋಗ ಕೇಂದ್ರ ಪುತ್ತೂರು ಶಾಖೆಯ ಯೋಗಾರ್ಥಿಗಳು ತಮ್ಮ ಸಮಾಜ ಸೇವಾ ಕಾರ್ಯಕ್ರಮದಂಗವಾಗಿ ಪಡುಕೆರೆ ಬೀಚ್ ಸ್ವಚ್ಛತಾ ಕಾರ್ಯ ನಡೆಸಲಾಯಿತು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಯೋಗ ಗುರು ಸತೀಶ್ ಕುಂದರ್ ಮಾತನಾಡಿ, ಯೋಗ ಬಂಧುಗಳು ವೈಯಕ್ತಿಕ ಸ್ವಾಸ್ಥ್ಯ ಸಂರಕ್ಷಣೆಗಾಗಿ  ಪ್ರತಿನಿತ್ಯ ಯೋಗ ಮಾಡುವುದರೊಂದಿಗೆ ಸಮಾಜ ಸ್ವಾಸ್ಥ್ಯಕ್ಕಾಗಿ ಪರಿಸರ ಸ್ವಚ್ಛತಾ ಕಾರ್ಯದಂಥ ಕಾರ್ಯಗಳನ್ನು ಕನಿಷ್ಠ ತಿಂಗಳಿಗೆ ಒಂದು ದಿನವಾದರೂ ಹಮ್ಮಿಕೊಂಡು ಇತರರಿಗೆ ಮಾದರಿಯಾಗಬೇಕು ಎಂದರು.


ಈ ಸಂದರ್ಭದಲ್ಲಿ ಯೋಗ ಶಿಕ್ಷಕಿ ಸುನೀತಾ ಚೈತನ್ಯ, ಯೋಗ ಬಂಧುಗಳಾದ ಲಕ್ಷ್ಮಿ ಟೀಚರ್, ಶಕುಂತಲಾ ಶೆಟ್ಟಿ, ಅನುಪಮಾ, ರಾಜೇಶ್ವರಿ ಭಟ್, ಸುನೀತಾ ಶೆಟ್ಟಿ, ಪ್ರೇಮ, ಕವಿತಾ, ವೇದ ಶೆಟ್ಟಿ, ಶಾಂತ, ವಾಣಿ, ಸುಮಿತ್ರ, ಸುಭದ್ರ, ಶುಭ ಶೆಟ್ಟಿ, ರೂಪ, ಮಮತಾ, ಶ್ವೇತಾ ಶೆಟ್ಟಿ, ಭಾರತಿ, ಸುಜಾತ, ಗುಲಾಬಿ, ವಿಜಯಲಕ್ಷ್ಮಿ ಶೆಟ್ಟಿ, ಮಾಲತಿ ಭರತ್ ರಾಜ್, ನೀತ ಶೆಟ್ಟಿ, ಸಂಧ್ಯಾ ಶೆಟ್ಟಿ, ಮಾಲತಿ ಶೆಟ್ಟಿ, ಸಂಧ್ಯಾ ಶೇಟ್, ಚಿತ್ರಕಲಾ, ಗಾಯತ್ರಿ ಭಟ್, ಶ್ರೀಲಕ್ಷ್ಮಿ, ಕುಶಲ ಶೆಟ್ಟಿ, ರಾಜೇಶ್ವರಿ ಶೇಟ್, ಚಂದ್ರಪ್ರತಿಮಾ, ಪ್ರೇರಣಾ, ಯಶವಂತ್, ಮನೀಶ್ ಮೊದಲಾದವರಿದ್ದರು.


ಸುಮಾರು ಒಂದು ಗಂಟೆ ಕಾಲ ಪಡುಕೆರೆ ಬೀಚ್ ಸ್ವಚ್ಛಗೊಳಿಸಲಾಯಿತು.

Ads on article

Advertise in articles 1

advertising articles 2

Advertise under the article