ಮಾನಸ ವಿಶೇಷ ಶಾಲೆಗೆ 20 ಲಕ್ಷ ಅನುದಾನ
Monday, March 31, 2025
ಲೋಕಬಂಧು ನ್ಯೂಸ್
ಪಡುಬಿದ್ರಿ: ಶಿರ್ವ ಪಾಂಬೂರು ಮಾನಸ ವಿಶೇಷ ಮಕ್ಕಳ ಪುನರ್ವಸತಿ ಮತ್ತು ತರಬೇತಿ ಕೇಂದ್ರಕ್ಕೆ ಕಂಪ್ಯೂಟರ್ ಡೇಟಾ ಕೇಂದ್ರ, ಸಂಶೋಧನಾ ಕೇಂದ್ರ ಮತ್ತು ಆಟಿಸಂ ಕೇಂದ್ರದ ಮೂಲಸೌಕರ್ಯ ಸೌಲಭ್ಯಗಳಿಗಾಗಿ ಅದಾನಿ ಸಮೂಹದ ಸಿಎಸ್ಆರ್ ಯೋಜನೆ ನಿರ್ವಹಿಸುವ ಅದಾನಿ ಫೌಂಡೇಶನ್ 20 ಲಕ್ಷ ರೂ. ಅನುದಾನ ನೀಡಿದೆ.ಅದಾನಿ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅಧ್ಯಕ್ಷ ಕಿಶೋರ್ ಆಳ್ವ ಅವರು ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದ ಅಧ್ಯಕ್ಷ ಹೆನ್ರಿ ಮಿನೇಜಸ್ ಅವರಿಗೆ ಹಸ್ತಾಂತರಿಸಿದರು. ಸಂಸ್ಥೆ ಸ್ಥಾಪಕ ಅಧ್ಯಕ್ಷ ಮತ್ತು ವ್ಯವಸ್ಥಾಪಕ ಟ್ರಸ್ಟಿ ಡಾ. ಎಡ್ವರ್ಡ್ ಲೋಬೊ, ಉಡುಪಿ ಡಯಸಿಸ್ ವಿಕಾರ್ ಜನರರ್ ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್ ಇದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಆಳ್ವ, ಅದಾನಿ ಫೌಂಡೇಶನ್ ಸಮುದಾಯದ ಉನ್ನತಿಗಾಗಿ ಸದಾ ಬದ್ಧವಾಗಿದೆ. ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರ ವಿಶೇಷ ಮಕ್ಕಳ ಪಾಲಿಗೆ ಆಶಾಕಿರಣವಾಗಿದೆ.
ವಿಶೇಷ ಮಕ್ಕಳಿಗೆ ಸಮಾಜ ಸಮಾನ ಅವಕಾಶ ನೀಡಬೇಕು. ಅವರ ಪ್ರತಿಭೆಗೆ ಮಾನ್ಯತೆ ನೀಡಬೇಕು ಹಾಗೂ ಪ್ರೀತಿಯೊಂದಿಗೆ ಶಿಕ್ಷಣ ಮತ್ತು ಶಕ್ತಿ ಕರ್ತೃತ್ವದೊಂದಿಗೆ ಅವರನ್ನು ಬೆಳೆಸಬೇಕು ಎಂದರು.
ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್, ಮಾನಸ ಸಂಸ್ಥೆ ಅಧ್ಯಕ್ಷ ಹೆನ್ರಿ ಮಿನೇಜಸ್ ಆಟಿಸಂ ಕೇಂದ್ರ ನಿರ್ಮಾಣಕ್ಕೆ ಬೆಂಬಲ ನೀಡಿದ ಅದಾನಿ ಫೌಂಡೇಶನ್ಗೆ ಕೃತಜ್ಞತೆ ಸಲ್ಲಿಸಿದರು.