ವಾಹನಗಳಿಗೆ ಅಡುಗೆ ಅನಿಲ ಬಳಸುವಂತಿಲ್ಲ
Wednesday, March 12, 2025
ಲೋಕಬಂಧು ನ್ಯೂಸ್
ಉಡುಪಿ: ವಾಹನ ಮತ್ತು ವಾಣಿಜ್ಯ ಸ್ಥಳಗಳಲ್ಲಿ ಗೃಹಬಳಕೆಯ ಸಿಲಿಂಡರ್'ಗಳನ್ನು ವ್ಯಾಪಕವಾಗಿ ಬಳಸುತ್ತಿದ್ದು, ಅದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ. ಮತ್ತು ಸ್ಪೋಟದ ಅಪಾಯ ಎದುರಾಗಿದೆ ಎಂದು ನಾಗಪುರದ ಗ್ರಾಹಕ್ ದಕ್ಷತ ಕಲ್ಯಾಣ್ ಫೌಂಡೇಶನ್ ತಿಳಿಸಿದೆ.ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ವಿಭಾಗದ ಮುಖ್ಯಸ್ಥ ಚೇತನ್ ಕುಮಾರ್, ವಾಣಿಜ್ಯ ಸಿಲಿಂಡರ್''ಗಳ ಬೆಲೆ 100 ಶೇ. ಹೆಚ್ಚಾಗಿರುವುದರಿಂದ ವಾಣಿಜ್ಯ ಸಂಸ್ಥೆಗಳು ಗೃಹಬಳಕೆಯ ಸಿಲಿಂಡರ್'ಗಳನ್ನು ವ್ಯಾಪಕವಾಗಿ ಬಳಸುತ್ತಿವೆ.
ಗೃಹ ಬಳಕೆಯ ಸಿಲಿಂಡರಿನ ಅನಿಲವನ್ನು 19 ಕೆಜಿ ವಾಣಿಜ್ಯ ಸಿಲಿಂಡರಾಗಿ ಪರಿವರ್ತಿಸಲಾಗುತ್ತಿದೆ. ಇಂಥ ದಂಧೆ ನಡೆಸುವವರಿಗೆ ತೈಲ ಕಂಪೆನಿಗಳು ಹಾಗೂ ಎಲ್.ಪಿ.ಜಿ ವಿತರಕರು ಬೆಂಬಲ ನೀಡುತ್ತಿದ್ದು, ಅದರ ವಿರುದ್ದ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಅರುಣ್ ಮತ್ತು ಪ್ರಶಾಂತ್ ಉಪಸ್ಥಿತರಿದ್ದರು.