
ಕಾಪುಗೆ ಕ್ರಿಕೆಟಿಗ ಸೂರ್ಯಕುಮಾರ್ ಭೇಟಿ
Monday, March 3, 2025
ಲೋಕಬಂಧು ನ್ಯೂಸ್
ಕಾಪು: ಭಾರತೀಯ ಕ್ರಿಕೆಟ್ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಸಪತ್ನೀಕನಾಗಿ ಮಾರ್ಚ್ 2ರಂದು ಕಾಪು ಶ್ರೀ ಹೊಸಮಾರಿಗುಡಿ ದೇವಳಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಪು ಶ್ರೀ ಮಾರಿಯಮ್ಮ ಸನ್ನಿಧಾನಕ್ಕೆ ಬರುವಾಗ ಏನೋ ಸೆಳೆತ ಉಂಟಾಗುತ್ತದೆ. ಇಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದ ನಂತರ ಕಪ್ತಾನನಾಗುವ ಯೋಗ ಸಿಕ್ಕಿದೆ. ಅದಕ್ಕಾಗಿ ಅಮ್ಮನಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು
ಪ್ರಥಮ ಬಾರಿಗೆ ಇಲ್ಲಿಗೆ ಬರುವಾಗ ದೇವಸ್ಥಾನದ ಕಾಮಗಾರಿ ನಡೆಯುತ್ತಿತ್ತು. ಅಮ್ಮನ ದೇವಸ್ಥಾನ ನೋಡುವಾಗ ಖುಷಿಯಾಗುತ್ತಿದೆ. ಇಂಥ ಅದ್ಭುತ ದೇವಸ್ಥಾನದಲ್ಲಿ ಪ್ರಾರ್ಥಿಸುವ ಭಕ್ತರೆಲ್ಲರ ಇಷ್ಟಾರ್ಥ ಈಡೇರುವಂತಾಗಲಿ ಎಂದರು.
ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ಅಭಿವೃದ್ಧಿ ಕೆಲಸ ವಿವರಿಸಿದರು.
ಪ್ರಧಾನ ತಂತ್ರಿ ಕೆ.ಪಿ.ಕುಮಾರಗುರು ತಂತ್ರಿ, ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ದೇವರ ಪ್ರಸಾದ ನೀಡಿ ಗೌರವಿಸಿದರು.
ಸೂರ್ಯಕುಮಾರ್ ಯಾದವ್ ದಂಪತಿ ಅನ್ನಪ್ರಸಾದ ಸ್ವೀಕರಿಸಿದರು.