ಪರೀಕ ಸೌಖ್ಯವನ ಬ್ರಹ್ಮಕಲಶೋತ್ಸವ: ಹೊರೆಕಾಣಿಕೆಗೆ ಚಾಲನೆ
Monday, March 3, 2025
ಲೋಕಬಂಧು ನ್ಯೂಸ್
ಹಿರಿಯಡಕ: ಇಲ್ಲಿಗೆ ಸಮೀಪದ ಪರೀಕ ಸೌಖ್ಯವನ ಶ್ರೀ ಪ್ರಸನ್ನ ಶ್ರೀನಿವಾಸ ಸೋಮೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಮಾರ್ಚ್ 2ರಂದು ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.ಪರ್ಕಳ ಬಿ.ಎಂ ಶಾಲಾ ಆವರಣದಿಂದ ಹೊರಟ ಹೊರೆಕಾಣಿಕೆ ಮೆರವಣಿಗೆಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಚಾಲನೆ ನೀಡಿದರು.
ಹೊರೆಕಾಣಿಕೆ ಮೆರವಣಿಗೆ ವಿವಿಧ ವಿನೋದಾವಳಿ ಮತ್ತು ವೇಷಭೂಷಣದೊಂದಿಗೆ ಹೊರಟು, ಪರ್ಕಳ ರಾಜಮಾರ್ಗವಾಗಿ ಪರೀಕ ದೇವಸ್ಥಾನ ತಲುಪಿತು.
ಪರ್ಕಳದ ಸುತ್ತಮುತ್ತಲಿನ ಊರುಗಳಿಂದ ಹೊರೆಕಾಣಿಕೆ ಸಂಗ್ರಹವಾಗಿದ್ದು, ಭಕ್ತರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡರು.