-->
ಶ್ರೀಕೃಷ್ಣ ಬಾಲನಿಕೇತನಕ್ಕೆ ಸೋಲಾರ್ ಲೈಟ್ ಕೊಡುಗೆ

ಶ್ರೀಕೃಷ್ಣ ಬಾಲನಿಕೇತನಕ್ಕೆ ಸೋಲಾರ್ ಲೈಟ್ ಕೊಡುಗೆ

ಲೋಕಬಂಧು ನ್ಯೂಸ್
ಉಡುಪಿ: ರೋಟರಿ ಉಡುಪಿ ವತಿಯಿಂದ ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಸೋಲಾರ್ ಲೈಟ್ ಮತ್ತು ಹಾಲ್'ನ ಕಿಟಕಿಗಳಿಗೆ ಪರದೆಯನ್ನು ಇತ್ತೀಚೆಗೆ ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ರೋಟರಿ ಮಾಜಿ ಜಿಲ್ಲಾ ಗವರ್ನರ್ ರಾಜರಾಮ ಭಟ್, ರೋಟರಿ ಉಡುಪಿಯ ಈ ಕೊಡುಗೆ ಮಕ್ಕಳ ಸುರಕ್ಷತೆಗೆ ಬಹಳ ಉಪಯುಕ್ತ ಎಂದು ತಿಳಿಸಿ, ದಾನಿಗಳನ್ನು ಅಭಿನಂದಿಸಿದರು.


ರೋಟರಿ ಅಧ್ಯಕ್ಷ ಗುರುರಾಜ್ ಭಟ್ ಸ್ವಾಗತಿಸಿದರು. ಬಾಲನಿಕೇತನದ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯರು ಪ್ರಾಸ್ತಾವಿಕ ಮಾತಾಡಿ, ಕೊಡುಗೆ ನೀಡಿದ ರೋಟರಿಯನ್ನು ಅಭಿನಂದಿಸಿದರು. ಬಾಲನಿಕೇತನ ಮತ್ತು ಅಲ್ಲಿನ ಮಕ್ಕಳ ಅನುಕೂಲಕ್ಕಾಗಿ ನೀಡಲಾದ ಈ ಕೊಡುಗೆ ಬಹಳ ಉಪಯುಕ್ತವಾಗಿದ್ದು ಅದಕ್ಕಾಗಿ ಸಹಕರಿಸಿದವರನ್ನು ಅಭಿನಂದಿಸಿದರು.


ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ವೈಷ್ಣವಿ ಆಚಾರ್ಯ, ಸಾಧನ ಮುಂಡ್ಕೂರು, ಸುಬ್ರಹ್ಮಣ್ಯ ಕಾರಂತ, ಶುಭಲಕ್ಷ್ಮಿ ಮಾತಾಜಿ ಮತ್ತು ಮಕ್ಕಳು ಇದ್ದರು.

Ads on article

Advertise in articles 1

advertising articles 2

Advertise under the article