-->
ಭಕ್ತಿ ಶ್ರದ್ಧೆಯಿಂದ ಮಾಡುವ ಕೆಲಸಕ್ಕೆ ದೇವರ ಅನುಗ್ರಹ

ಭಕ್ತಿ ಶ್ರದ್ಧೆಯಿಂದ ಮಾಡುವ ಕೆಲಸಕ್ಕೆ ದೇವರ ಅನುಗ್ರಹ

ಲೋಕಬಂಧು ನ್ಯೂಸ್
ಕಾಪು: ದುಷ್ಟ ಶಕ್ತಿಗಳನ್ನು ನಾಶ ಮಾಡಿ ಶಿಷ್ಟರನ್ನು ಸದಾ ರಕ್ಷಿಸುವ ತಾಯಿ ಮಾರಿಯಮ್ಮ. ಆಕೆಗೆ ಕಾಪು ಶ್ರೀ ಹೊಸ ಮಾರಿಗುಡಿಯಲ್ಲಿ ಅದ್ಭುತವಾದ ಸೇವೆ ನಡೆಯುತ್ತಿದೆ. ದೇವಸ್ಥಾನದ ಮರದ ಕೆಲಸ, ಶಿಲ್ಪ ಕೆಲಸಗಳು ಅದ್ಭುತವಾಗಿದ್ದು, ಇದು ಶ್ರದ್ದೆಯಿಂದ ಮಾಡಿದ ಕೆಲಸ. ಭಕ್ತಿ ಮತ್ತು ಶೃದ್ದೆಯಿಂದ ಮಾಡುವ ಕಾರ್ಯಕ್ಕೆ ದೇವರ ಅನುಗ್ರಹವೂ ಪ್ರಾಪ್ತಿಯಾಗುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.
ಮಾರ್ಚ್ 4ರಂದು ಕಾಪು ಶ್ರೀಹೊಸ ಮಾರಿಗುಡಿ ನೂತನ ದೇವಸ್ಥಾನದಲ್ಲಿ ನಡೆದ ಉಚ್ಚಂಗಿ ದೇವಿ ಕುಂಭಾಭಿಷೇಕ ಶುಭಾವಸರದಲ್ಲಿ ಶ್ರೀಕ್ಷೇತ್ರಕ್ಕೆ ಭೇಟಿ ನೀಡಿ, ನಂತರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಾ. ಹೆಗ್ಗಡೆಯವರನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ, ಕಾಪು ವಲಯ ಹಾಗೂ ಒಕ್ಕೂಟದ ವತಿಯಿಂದ ಪದಾಧಿಕಾರಿಗಳು ಗೌರವಿಸಿದರು.


ದೇವಸ್ಥಾನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಮಾಧವ ಪಾಲನ್, ಮಾಜಿ ಸಚಿವ ವಿನಯಕುಮಾ‌ರ್ ಸೊರಕೆ, ಹರಿಯಪ್ಪ ಕೊಟ್ಯಾನ್, ಕಾಪು ದಿವಾಕರ ಶೆಟ್ಟಿ, ಮಹೇಶ್ ಕೊಟ್ಯಾನ್, ಶಶಿಧರ ಶೆಟ್ಟಿ ಮಲ್ಲಾರು, ಯೋಗೀಶ್ ವಿ.ಶೆಟ್ಟಿ ಬಾಲಾಜಿ ಉಪಸ್ಥಿತರಿದ್ದರು.


ದಾಮೋದರ ಶರ್ಮಾ ಬಾರ್ಕೂರು ಸ್ವಾಗತಿಸಿ, ಅಶೋಕ್‌ ಪಕ್ಕಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Ads on article

Advertise in articles 1

advertising articles 2

Advertise under the article