-->
ಕಲಾಸಂಗಮ‌ ಸಂಪನ್ನ

ಕಲಾಸಂಗಮ‌ ಸಂಪನ್ನ

ಲೋಕಬಂಧು ನ್ಯೂಸ್
ಉಡುಪಿ: ಪರ್ಕಳದ ಮಂಗಳ ಕಲಾ ಸಾಹಿತ್ಯ ವೇದಿಕೆಯ 21ನೇ ವರ್ಷದ ಸಂಭ್ರಮ ಕಲಾಸಂಗಮ ಶ್ರೀ ವಿಘ್ನೇಶ್ವರ ಸಭಾಭವನದಲ್ಲಿ ನಡೆಯಿತು.ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಸರ್ವೋದಯ ಶೆಟ್ಟಿಗಾರ್ ಪರ್ಕಳ ಹಾಗೂ ಉದ್ಯಮಿ ಮೋಹನದಾಸ್ ನಾಯಕ್ ಪರ್ಕಳ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.


ಸಂಜೆ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇದಿಕೆ ಗೌರವಾಧ್ಯಕ್ಷ ಶ್ರೀನಿವಾಸ ಉಪಾಧ್ಯ ವಹಿಸಿದ್ದರು.


ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ  ಪ್ರಮೋದ್ ಮಧ್ವರಾಜ್, ತುಳು ಚಲನಚಿತ್ರ ಹಾಗೂ ನಾಟಕ ಕಲಾವಿದ ಭೋಜರಾಜ ವಾಮಂಜೂರು, ಆಧುನಿಕ ಭಗೀರಥ ಪದ್ಮಶ್ರೀ ಅಮೈ ಮಾಲಿಂಗ ನಾಯ್ಕ್, ಚಲನಚಿತ್ರ ನಟ ಯೋಗೇಶ್ ಶೆಟ್ಟಿ ಧರ್ಮೆಮಾರ್, ಕವಿ ಸಾಹಿತಿ  ವಸಂತ್ ಕುಮಾರ್ ಪೆರ್ಲ, ಬೂದ ಶೆಟ್ಟಿಗಾರ್ ಆಗಮಿಸಿದ್ದರು.


ಈ ಸಂದರ್ಭದಲ್ಲಿ ರಾಘವೇಂದ್ರ ಪ್ರಭು ಕರ್ವಾಲು, ಎಂ. ಮನೋಹರ್, ಮಹೇಶ್ ಮರ್ಣೆ ಮತ್ತು ಕೇಶವ ಕೋಟ್ಯಾನ್, ಅವರನ್ನು ಸನ್ಮಾನಿಸಲಾಯಿತು.


ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ತೋನ್ಸೆ ಪುಷ್ಕಳ ಕುಮಾರ್ ಅವರಿಂದ ಹರಿಕಥಾ ಕಾಲಕ್ಷೇಪ, ಮಹಾಲಿಂಗೇಶ್ವರ ನಾಟ್ಯ ತಂಡದವರಿಂದ ದೀಕ್ಷಾ ಗುಂಡುಪಾದೆ ನಿರ್ದೇಶನದಲ್ಲಿ ನೃತ್ಯರೂಪಕ, ಸಿಂಚನ ಮ್ಯೂಸಿಕಲ್ಸ್ ರಸಮಂಜರಿ ನಡೆಯಿತು.


ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಸ್ವಾಗತಿಸಿದರು. ಸಾನ್ವಿ ಪ್ರಾರ್ಥಿಸಿದರು. ಶ್ರೀನಿವಾಸ ನಾಯಕ್ ಚಕ್ರತೀರ್ಥ  ಕಾರ್ಯಕ್ರಮ ನಿರೂಪಿಸಿದರು.

Ads on article

Advertise in articles 1

advertising articles 2

Advertise under the article