ಹೊಸ ಹರುಷ ಸಂವತ್ಸರ ಪೂರ್ತಿ ಇರಲಿ
Saturday, March 29, 2025
ಲೋಕಬಂಧು ನ್ಯೂಸ್
ಉಡುಪಿ: ವಿಶ್ವಾವಸು ನಾಮ ಸಂವತ್ಸರ ಸಮಸ್ತರಿಗೂ ಸುಖ, ಸಂತಸ ತರಲಿ. ಹೊಸ ಹರುಷ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ಸಂವತ್ಸರ ಪೂರ್ತಿ ಇರಲಿ ಎಂದು ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾರೈಸಿದ್ದಾರೆ.ಚಾಂದ್ರಮಾನ ಯುಗಾದಿ ಶುಭಾಶಯ ಸಂದೇಶ ನೀಡಿದ ಶ್ರೀಪಾದರು, ಲೋಕ ಕ್ಷೇಮವನ್ನು ಆಶಿಸಿ ಶ್ರೀಕೃಷ್ಣ ಮುಖ್ಯಪ್ರಾಣರಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಾಗಿ ತಿಳಿಸಿದ ಅವರು, ಈ ಪರ್ವಕಾಲದಲ್ಲಿ ಪ್ರತಿಯೊಬ್ಬರೂ ಗೀತಾ ಲೇಖನ ಬರೆಯುವ ಸಂಕಲ್ಪ ಮಾಡುವ ಮೂಲಕ ಶ್ರೀಕೃಷ್ಣ ಕೃಪೆಗೆ ಪಾತ್ರರಾಗಬೇಕು. ಮುಂಬರುವ ನವೆಂಬರ್ 30ರೊಳಗೆ ಉಡುಪಿ ಶ್ರೀಕೃಷ್ಣನಿಗೆ ಸಮರ್ಪಿಸಬೇಕು ಎಂದು ತಿಳಿಸಿದ್ದಾರೆ.
ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸುವಂತೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.