-->
ಯುಗಾದಿ ಶುಭಾಶಯ ಮರಳುಚಿತ್ರ

ಯುಗಾದಿ ಶುಭಾಶಯ ಮರಳುಚಿತ್ರ

ಲೋಕಬಂಧು ನ್ಯೂಸ್
ಕುಂದಾಪುರ: ನೂತನ ವಿಶ್ವಾವಸು ನಾಮ ಸಂವತ್ಸರದ ಹಚ್ಚಹಸುರಿನ ಇಳೆಯಲ್ಲಿ ಬೇವು ಬೆಲ್ಲದಂಥ ಜೀವನದ ಸಂಭ್ರಮದಲ್ಲಿ ಆರಂಭದ ಹಬ್ಬ ಚಾಂದ್ರಮಾನ ಯುಗಾದಿ ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಎಂಬ ಧ್ಯೇಯದೊಂದಿಗೆ ಶುಭಾಶಯ ಸಾರುವ ಮರಳು ಶಿಲ್ಪವನ್ನು ಕೋಟೇಶ್ವರ ಹಳೆಅಳಿವೆ ಕಡಲ ತೀರದಲ್ಲಿ ಉಡುಪಿ ಸ್ಯಾಂಡ್ ಥೀಂ ಕಲಾವಿದರಾದ ಹರೀಶ್ ಸಾಗಾ, ಸಂತೋಷ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ರಚಿಸಿದ್ದಾರೆ.ಹಸಿರು ತಳಿರು ತೋರಣದೊಂದಿಗೆ ಮನೆ ಗೋಡೆ, ಕಳಸೆಯಲ್ಲಿ ತುಂಬಿರುವ ಅಕ್ಕಿ, ಹರಿವಾಣದಲ್ಲಿ ಬೇವು ಬೆಲ್ಲ, ಮಾವು, ತೆಂಗಿನಕಾಯಿ, ಸೀಯಾಳ ಗೊಂಚಲಿನೊಂದಿಗೆ ಈ ಕಲಾಕೃತಿ ಯುಗಾದಿ ಹಬ್ಬದ ಶುಭಾಶಯಗಳು ನಾಮಾಂಕಿತದೊಂದಿಗೆ ಆಕರ್ಷಣೀಯವಾಗಿ ಮೂಡಿಬಂದಿದೆ.

Ads on article

Advertise in articles 1

advertising articles 2

Advertise under the article