-->
ಹಿಂದುತ್ವದ ಭದ್ರಕೋಟೆಗೆ ಡಿಕೆಶಿಗೆ ಸ್ವಾಗತ:ಶಾಸಕ ಸುನಿಲ್ ಹೇಳಿಕೆ ವೈರಲ್

ಹಿಂದುತ್ವದ ಭದ್ರಕೋಟೆಗೆ ಡಿಕೆಶಿಗೆ ಸ್ವಾಗತ:ಶಾಸಕ ಸುನಿಲ್ ಹೇಳಿಕೆ ವೈರಲ್

ಲೋಕಬಂಧು ನ್ಯೂಸ್
ಕಾರ್ಕಳ: ಡಿಸಿಎಂ ಡಿ.ಕೆ. ಶಿವಕುಮಾರ್ ಮಾ.2ರಂದು ಉಡುಪಿ ಜಿಲ್ಲೆಗೆ ಭೇಟಿ ನೀಡಲಿದ್ದು, ಮೂರು ಕಡೆಗಳ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಅವರಿಗೆ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವಿಶೇಷವಾಗಿ ಸ್ವಾಗತ ಸಂದೇಶ ನೀಡಿದ್ದು, ಅದು ವೈರಲ್ ಆಗಿದೆ. ಜೊತೆಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಡಿ.ಕೆ.ಶಿವಕುಮಾರ್ ಮಾರ್ಚ್ 2ರಂದು ಕಾಪು ಶ್ರೀ ಹೊಸಮಾರಿಗುಡಿ ಬ್ರಹ್ಮಕಲಶೋತ್ಸವ ಗದ್ದುಗೆ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸಭೆ ನಡೆಸುವರು. ಬಳಿಕ ಕಾರ್ಕಳದಲ್ಲಿ ನಡೆಯುವ ಕಾಂಗ್ರೆಸ್ ಕುಟುಂಬೋತ್ಸವದಲ್ಲಿ ಪಾಲ್ಗೊಳ್ಳುವರು.


ಇದೇ ಸಂದರ್ಭದಲ್ಲಿ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ವಿಭಿನ್ನವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಾಗತ ಕೋರಿ, `ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದರೂ ಕುಂಭಮೇಳದಲ್ಲಿ ಮಿಂದ, ಎಐಸಿಸಿ ಮುನಿಸಿನ ಮಧ್ಯೆಯೂ ಈಶಾ ಫೌಂಡೇಶನ್ ಶಿವರಾತ್ರಿಯಲ್ಲಿ ನಿಂದ, ಹಿಂದುವಾಗಿ ಹುಟ್ಟಿ ಹಿಂದುವಾಗಿಯೇ ಸಾಯುವೆ ಎಂದ, ಹಿಂದುತ್ವದೆಡೆಗೆ ಹೆಜ್ಜೆ ಹಾಕಲು ಮನಸ್ಸು ಮಾಡುತ್ತಿರುವ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಗಂಡುಮೆಟ್ಟಿನ ನೆಲ, ಹಿಂದುತ್ವದ ಭದ್ರಕೋಟೆ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ಆತ್ಮೀಯ ಸ್ವಾಗತ. ನಿಮ್ಮ ಈ ಭೇಟಿ ಹಿಂದುತ್ವ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಫಲಪ್ರದವಾಗಲಿ' ಎಂದು ಸಾಮಾಜಿಕ ಜಾಲತಾಣ `ಎಕ್ಸ್`ನಲ್ಲಿ ಹರಿಯಬಿಟ್ಟಿದ್ದಾರೆ.

Ads on article

Advertise in articles 1

advertising articles 2

Advertise under the article