ದುಬೈ ನೋಂದಣಿ ಕಾರು ಮಾಲೀಕರಿಗೆ ದಂಡ
Saturday, March 1, 2025
ಲೋಕಬಂಧು ನ್ಯೂಸ್
ಉಡುಪಿ: ಮಣಿಪಾಲದ ರಾಜತಾದ್ರಿ ರಸ್ತೆಯಲ್ಲಿ ಅಜಾಗರೂಕವಾಗಿ ದೋಷಪೂರಿತ ಹಾರ್ನ್ ಮಾಡುವ ಮೂಲಕ ಕಾರು ಚಲಾಯಿಸಿಕೊಂಡು ಹೋಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ, ದುಬೈ ನೋಂದಾಯಿತ ಕಾರುಗಳೆಂದು ತಿಳಿದುಬಂದಿದ್ದು, 3 ಕಾರುಗಳನ್ನು ಪೊಲೀಸರು ಫೆ.27ರಂದು ವಶಪಡಿಸಿಕೊಂಡಿದ್ದಾರೆ.ದುಬೈ ನೋಂದಣಿಯ ಕಾರುಗಳ ದಾಖಲೆಗಳ ಪರಿಶೀಲನೆ ಬಗ್ಗೆ ಉಡುಪಿ ಆರ್.ಟಿ.ಓ ಅವರಿಗೆ ಪತ್ರ ಬರೆಯಲಾಗಿದ್ದು, ಆ ಮೂರೂ ಕಾರುಗಳ ಎಲ್ಲ ದಾಖಲಾತಿಗಳು ಕಾನೂನುಬದ್ಧವಾಗಿರುವುದು ಕಂಡುಬಂದಿದೆ.
ಅಜಾಗರೂಕತೆಯ ಚಾಲನೆ ಹಾಗೂ ದೋಷಪೂರಿತ ಹಾರ್ನ್ ಬಳಸಿರುವ ಬಗ್ಗೆ ಪ್ರತೀ ಕಾರಿಗೆ ತಲಾ 1,500 ರೂ.ನಂತೆ ದಂಡ ವಿಧಿಸಿ, ಬಿಡುಗಡೆಗೊಳಿಸಲಾಗಿದೆ ಎಂದು ಶನಿವಾರ ಎಸ್.ಪಿ. ಡಾ.ಅರುಣ್ ಕೆ. ಕುಮಾರ್ ತಿಳಿಸಿದ್ದಾರೆ.