
ಯೋಗಿ ಆದಿತ್ಯನಾಥ್ ಸಿಎಂ ಅವಧಿಯಲ್ಲಿ 15 ಸಾವಿರ encounter
Friday, July 18, 2025
ಲೋಕಬಂಧು ನ್ಯೂಸ್, ಲಕ್ನೋ
ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಉತ್ತರ ಪ್ರದೇಶದಲ್ಲಿ ಇದುವರೆಗೆ 15 ಸಾವಿರ ಎನ್‌ಕೌಂಟರ್‌ಗಳಾಗಿದ್ದು, ಆ ಪೈಕಿ 238 ಮಂದಿಯ ಹತ್ಯೆಯಾಗಿದೆ.
2017ರಿಂದ ಉತ್ತರ ಪ್ರದೇಶ ಪೊಲೀಸರು ಸುಮಾರು 15 ಸಾವಿರ ಎನ್‌ಕೌಂಟರ್ ದಾಖಲಿಸಿದ್ದಾರೆ. ಅದರಲ್ಲಿ 30 ಸಾವಿರಕ್ಕೂ ಹೆಚ್ಚು ಅಪರಾಧಿಗಳನ್ನು ಬಂಧಿಸಲಾಗಿದೆ. 9 ಸಾವಿರಕ್ಕೂ ಹೆಚ್ಚು ಜನರ ಕಾಲಿಗೆ ಗುಂಡೇಟು ಬಿದ್ದಿದೆ.
ಪರಾರಿಯಾಗಲು ಪ್ರಯತ್ನಿಸಿದವರು, ಮತ್ತೆ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡವರನ್ನು ಗುರಿಯಾಗಿಸಿ ನಡೆಸಿದ ಕಾರ್ಯಾಚರಣೆಗಳಲ್ಲಿ 238 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.