
fishing rules ಏಕರೂಪ ಮೀನುಗಾರಿಕೆ ನಿಯಮ ಜಾರಿಗೆ ಚಿಂತನೆ
Friday, July 18, 2025
ಲೋಕಬಂಧು ನ್ಯೂಸ್, ನವದೆಹಲಿ
ದೇಶದಲ್ಲಿ ಒಂದೇ ಅವಧಿಯ ಮೀನುಗಾರಿಕೆ ನಿಯಮ ಜಾರಿಗೆ ತರಲು ಕೇಂದ್ರ ಚಿಂತನೆ ನಡೆಸಿದ್ದು, ಅದರ ಜೊತೆಗೆ ನಿಷೇಧದ ಅವಧಿಯೂ ವಿಸ್ತರಣೆಯಾಗುವ ಸಾಧ್ಯತೆ ಇದೆ.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ ದೇಶದಲ್ಲಿ ಏಕರೂಪದ ನಿಷೇಧದ ಅವಧಿ ಜಾರಿಗೆ ಚಿಂತನೆ ನಡೆಸುತ್ತಿದೆ.
ಅದಕ್ಕಾಗಿಯೇ ತಾಂತ್ರಿಕ ಸಮಿತಿಯೊಂದನ್ನು ರಚಿಸಿದ್ದು, ಮೀನುಗಾರರಲ್ಲಿ ಆಶಾಭಾವ ಮೂಡಿಸಿದೆ.
ಸದ್ಯ ಕರ್ನಾಟಕ ಕರಾವಳಿಯಲ್ಲಿ ಜೂ. 1ರಿಂದ ಜು.31ರ ವರೆಗೆ ಎರಡು ತಿಂಗಳ ಕಾಲ ಮೀನುಗಾರಿಕೆ ನಿಷೇಧ ಜಾರಿಯಲ್ಲಿದೆ.