Bengaluru: ಪಾಲೆ ಕೆತ್ತೆ ಕಷಾಯ ವಿತರಣೆ
Thursday, July 24, 2025
ಲೋಕಬಂಧು ನ್ಯೂಸ್, ಬೆಂಗಳೂರು
ಪೂರ್ಣಪ್ರಜ್ಞ ವಿದ್ಯಾಪೀಠ ಪಾಠಶಾಲೆಯ ಆವರಣದಲ್ಲಿ ಪೂರ್ಣಪ್ರಜ್ಞ ಪ್ರತಿಷ್ಠಾನ ಹಾಗೂ ತೌಳವ ತುಳುವರೆ ಒಕ್ಕೂಟ ಸಹಯೋಗದೊಂದಿಗೆ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಪಾಲೆ ಮರದ ಕೆತ್ತೆಯ ಕಷಾಯ ಹಾಗೂ ಮೆಂತೆ ಗಂಜಿ ವಿತರಣೆ ನಡೆಯಿತು.ಚಾತುರ್ಮಾಸ್ಯ ವ್ರತ ದೀಕ್ಷಿತರಾಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಭಾವಿ ಪರ್ಯಾಯ ಶೀರೂರು ಶ್ರೀ ವೇದವರ್ಧನತೀರ್ಥ ಶ್ರೀಪಾದರು ಉದ್ಘಾಟಿಸಿದರು.