-->
Bengaluru: ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ

Bengaluru: ನಾಟಕ ಅಕಾಡೆಮಿ ಪ್ರಶಸ್ತಿ ಪ್ರಕಟ

ಲೋಕಬಂಧು ನ್ಯೂಸ್, ಬೆಂಗಳೂರು
ಕರ್ನಾಟಕ ನಾಟಕ ಅಕಾಡೆಮಿಯ 2025-26ನೇ ಸಾಲಿನ ಜೀವಮಾನ ಸಾಧನೆ ಮತ್ತು ವಾರ್ಷಿಕ ದತ್ತಿ ನಿಧಿ ಪ್ರಶಸ್ತಿಗಳನ್ನು ಪ್ರಕಟಿಸಿದೆ.2025-26ನೇ ಸಾಲಿನ ಜೀವಮಾನ ಸಾಧನೆಯ ಗೌರವ ಪ್ರಶಸ್ತಿಗೆ ರಂಗಭೂಮಿಯ ಶಶಿಧರ ಅಡಪ ಬಿ. (ದಕ್ಷಿಣ ಕನ್ನಡ) ಭಾಜನರಾಗಿದ್ದರೆ, ಖ್ಯಾತ ಪತ್ರಕರ್ತ, ನಾಟಕ ವಿಮರ್ಶಕ ಜಿ.ಎನ್. ಮೋಹನ್ ಸೇರಿದಂತೆ ರಂಗಭೂಮಿಯ 31 ಸಾಧಕರಿಗೆ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದೆ.
ವಾರ್ಷಿಕ ಪ್ರಶಸ್ತಿ ಮಾಲತೇಶ ಬಡಿಗೇರ (ಗದಗ), ಟಿ.ರಘು ( ಬೆಂಗಳೂರು), ವೆಂಕಟಾಚಲ (ಬೆಂಗಳೂರು), ಮುರ್ತುಜ ಸಾಬ್ ಘಟ್ಟಿಗನೂರ (ಬಾಗಲಕೋಟೆ), ಚೆನ್ನಕೇಶವಮೂರ್ತಿ ಎಂ.(ಬೆಂಗಳೂರು), ಗೋಪಾಲ ಯಲ್ಲಪ್ಪ ಉಣಕಲ್ ( ಹುಬ್ಬಳ್ಳಿ ಧಾರವಾಡ), ಚಿಕ್ಕಪ್ಪಯ್ಯ (ತುಮಕೂರು), ದೇವರಾಜ ಹಲಗೇರಿ ( ಕೊಪ್ಪಳ), ಡಾ.ವೈ ಎಸ್. ಸಿದ್ದರಾಮೇಗೌಡ (ಬೆಂಗಳೂರು ದಕ್ಷಿಣ), ಅರುಣ್ ಕುಮಾರ್ ಆರ್.ಓ. (ದಾವಣಗೆರೆ), ರೋಹಿಣಿ ರಘುನಂದನ್ (ಬೆಂಗಳೂರು), ರತ್ನ ಸಕಲೇಶಪುರ (ಹಾಸನ), ವಿ.ಎನ್ ಅಶ್ವಥ್ (ಬೆಂಗಳೂರು), ಶಿವಯ್ಯಸ್ವಾಮಿ ಬಿಬ್ಬಳ್ಳಿ (ಸೇಡಂ ಕಲ್ಬುರ್ಗಿ), ಕೆ.ಆರ್. ಪೂರ್ಣೇಂದ್ರಶೇಖರ್ (ಬೆಂಗಳೂರು), ಭೀಮನಗೌಡ ಬಿ. ಕಟಾವಿ (ಬೆಳಗಾವಿ), ಕೆ.ಮುರಳಿ (ಕೋಲಾರ), ಮುತ್ತುರಾಜ್ (ಬೆಂಗಳೂರು ಗ್ರಾಮಾಂತರ), ಮಲ್ಲೇಶ್ ಬಿ. ಕೋನಾಳ (ಯಾದಗಿರಿ), ಸುಗಂಧಿ ಉಮೇಶ್ ಕಲ್ಮಾಡಿ (ಉಡುಪಿ), ಮಹೇಶ ವಿ. ಪಾಟೀಲ್ (ಬೀದರ್), ಶಿವಪುತ್ರಪ್ಪ ಶಿವಸಂಪಿ (ಕೊಪ್ಪಳ), ಸದ್ಯೋಜಾತ ಶಾಸ್ತ್ರಿ ಹಿರೇಮಠ (ವಿಜಯನಗರ), ಡಾ. ಉದಯ್ ಎಸ್. ಆರ್. (ಮೈಸೂರು).

ದತ್ತಿ ಪ್ರಶಸ್ತಿ
ಎಚ್ .ವಿ. ವೆಂಕಟಸುಬ್ಬಯ್ಯ ದತ್ತಿ ಪುರಸ್ಕಾರ- ಮಂಜಪ್ಪ ಪಿ.ಎ. (ಕೊಡಗು), ಬಿ.ಆರ್. ಅರಿಶಿಣಕೋಡಿ ದತ್ತಿ ಪುರಸ್ಕಾರ- ಕಿರಣ್ ರತ್ನಾಕರ ನಾಯ್ಕ (ಉತ್ತರ ಕನ್ನಡ), ಕೆ.ರಾಮಚಂದ್ರಯ್ಯ ದತ್ತಿ ಪುರಸ್ಕಾರ- ಸಿ.ವಿ. ಲೋಕೇಶ್ (ದೊಡ್ಡಬಳ್ಳಾಪುರ), ಮಾಲತಿಶ್ರೀ ಮೈಸೂರು ದತ್ತಿ ಪುರಸ್ಕಾರ- ಎಚ್.ಪಿ. ಈಶ್ವರಾಚಾರಿ (ಮಂಡ್ಯ), ನಟರತ್ನ ಚಿಂದೋಡಿ ವೀರಪ್ಪ ದತ್ತಿ ಪುರಸ್ಕಾರ- ದೊಡ್ಡಮನೆ ವೆಂಕಟೇಶ್ (ಬೆಂಗಳೂರು), ಪದ್ಮಶ್ರೀ ಚಿಂದೋಡಿ ಲೀಲಾ ದತ್ತಿ ಪುರಸ್ಕಾರ- ಪಿ.ವಿ ಕೃಷ್ಣಪ್ಪ (ಬೆಂಗಳೂರು), ಕಲ್ಚರ್ ಕಮೆಡಿಯನ್ ಕೆ. ಹಿರಣ್ಣಯ್ಯ ದತ್ತಿ ಪುರಸ್ಕಾರ- ನಾಗೇಂದ್ರ ಪ್ರಸಾದ್ (ಬೆಂಗಳೂರು).


2024-25ನೇ ಸಾಲಿನ ಬಾಕಿ ಇದ್ದ ವಾರ್ಷಿಕ ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಶಂಕರ ಭಟ್ ಆಯ್ಕೆಯಾಗಿದ್ದಾರೆ ಎಂದು ನಾಟಕ ಅಕಾಡೆಮಿ ಪ್ರಕಟಣೆ ತಿಳಿಸಿದೆ.

Ads on article

Advertise in articles 1

advertising articles 2

Advertise under the article