ಲೋಕಬಂಧು ನ್ಯೂಸ್, ಬೆಂಗಳೂರು
ಶೀರೂರು ಮಠದ ಪೂರ್ವ ಯತಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರ ಆರಾಧನೆ ಪ್ರಯುಕ್ತ ಭಾವಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಇಲ್ಲಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಚಾತುರ್ಮಾಸ್ಯ ವ್ರತಾನುಷ್ಠಾನ ಸಂದರ್ಭದಲ್ಲಿ ಗುರುವಾರ ಸಂಸ್ಥಾನ ಪೂಜೆ ನಡೆಸಿ, ಗುರುಗಳಿಗೆ ಪಾದ್ಯ ನೀಡಿದರು.