ಲೋಕಬಂಧು ನ್ಯೂಸ್, ಉಡುಪಿ
ನಗರದ ರಥಬೀದಿಯ ಸಮೀಪ ನಿರ್ಮಿಸಿರುವ ಸುಬ್ರಹ್ಮಣ್ಯ ಮಠದ ಶಾಖಾಮಠ 'ಅನಂತಶ್ರೀ ಭವನ' ವನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ದೀಪ ಬೆಳಗಿ, ಉದ್ಘಾಟಿಸಿದರು.
ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು.