Kateelu ಡಾ.ಸುರೇಶ್ ರಾವ್'ಗೆ ಮಾತೃ ವಿಯೋಗ
Thursday, July 31, 2025
ಲೋಕಬಂಧು ನ್ಯೂಸ್, ಕಟೀಲು
ಮೂಲತಃ ಸುರತ್ಕಲ್ ಸಮೀಪದ ಕೃಷ್ಣಾಪುರದವರಾದ ಕಾತ್ಯಾಯಿನಿ ಸಂಜೀವ ರಾವ್ (90) ಗುರುವಾರ ಇಲ್ಲಿನ ಸ್ವಗೃಹದಲ್ಲಿ ನಿಧನರಾದರು.ಮುಂಬಯಿ ವಿಲೇಪಾರ್ಲೆಯಲ್ಲಿ ಟೈಲರಿಂಗ್ ವೃತ್ತಿ ನಡೆಸುತ್ತಿದ್ದ ದಿ.ಸಂಜೀವ ರಾವ್ ಪತ್ನಿ ಕಾತ್ಯಾಯಿನಿ ರಾವ್ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿ ಅಷ್ಟಮಠ ಸೇರಿದಂತೆ ಸೇರಿದಂತೆ ನಾಡಿನ ಮತ್ತು ಮುಂಬಯಿಯ ಅನೇಕ ದೈವ- ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಪ್ರೇರಣೆಯಾಗಿದ್ದರು.
ಕೊಡುಗೈ ದಾನಿಯಾಗಿದ್ದ ಅವರು ಅನೇಕ ಮಕ್ಕಳ ಜ್ಞಾನರ್ಜನೆಗೆ ವಿದ್ಯಾನಿಧಿ ನೀಡಿದ್ದರು. ಪತಿ ಸಂಜೀವ ರಾವ್ ಹೆಸರಲ್ಲಿ ಮುಂಬಯಿ ಮತ್ತು ಕಟೀಲಿನಲ್ಲಿ ಸಂಜೀವಿನಿ ಆಸ್ಪತ್ರೆಯನ್ನು ಪುತ್ರ ಡಾ. ಸುರೇಶ್ ಎಸ್. ರಾವ್ ಕಟೀಲು ಮೂಲಕ ಸ್ಥಾಪಿಸಿದ್ದಾರೆ.
ಮೃತರು ಡಾ.ಸುರೇಶ್ ಎಸ್.ರಾವ್ ಕಟೀಲು ಸೇರಿದಂತೆ ಇಬ್ಬರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಕಾತ್ಯಾಯಿನಿ ರಾವ್ ನಿಧನಕ್ಕೆ ಬಿಎಸ್‌ಕೆಬಿ ಅಸೋಸಿಯೇಷನ್ (ಗೋಕುಲ) ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಮುಂಬಯಿ ಮತ್ತು ಕಟೀಲಿನ ಅನೇಕ ಗಣ್ಯ ಮಹನೀಯರು ಸಂತಾಪ ಸೂಚಿಸಿದ್ದಾರೆ.