Mangaluru: ಖೈದಿಯಿಂದ ಹಣ ಸುಲಿಗೆ ಮಾಡಿದ ಸಹ ಖೈದಿಗಳ ವಿರುದ್ಧ ಕೆ-ಕೋಕಾ ಕೇಸ್
Wednesday, July 23, 2025
ಲೋಕಬಂಧು ನ್ಯೂಸ್, ಮಂಗಳೂರು
ಇಲ್ಲಿನ ಜಿಲ್ಲಾ ಕಾರಾಗೃಹದಲ್ಲಿ ಖೈದಿಗೆ ಹಲ್ಲೆ ನಡೆಸಿ ಹಣ ಸುಲಿಗೆ ಮಾಡಿದ್ದ ನಾಲ್ವರು ಸಹ ಖೈದಿಗಳ ವಿರುದ್ಧ ಕೆ-ಕೋಕಾ ಕಾಯ್ದೆಯಡಿ ಕೇಸು ದಾಖಲಾಗಿದೆ.ಮಿಥುನ್ ಎಂಬಾತನಿಗೆ ಸಹ ಖೈದಿಗಳಾದ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದಿಲೇಶ್ ಬಂಗೇರ ಮತ್ತು ಲಾಯಿ ವೇಗಸ್ ಜುಲೈ 9ರಂದು 50 ಸಾವಿರ ರೂ. ನೀಡುವಂತೆ ಹಲ್ಲೆ ಮಾಡಿದ್ದರು. ಬಳಿಕ ಆರೋಪಿಗಳು 2 ಮೊಬೈಲ್ ಸಂಖ್ಯೆಗೆ ಮಿಥುನ್ ಪತ್ನಿಯಿಂದ 20 ಸಾವಿರ ರೂ. ಫೋನ್ ಪೇ ಮೂಲಕ ಜಮಾ ಮಾಡಿಸಿಕೊಂಡಿದ್ದರು.
ಹಿರಿಯ ಪೊಲೀಸ್ ಅಧಿಕಾರಿಗಳು ಜೈಲಿನಲ್ಲಿ ಪರಿಶೀಲನೆ ನಡೆಸಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.