-->
New Delhi: ಪ್ರಧಾನಿಯಾಗಿ ಇಂದಿರಾ ಅವಧಿ ಹಿಮ್ಮೆಟ್ಟಿದ ಮೋದಿ

New Delhi: ಪ್ರಧಾನಿಯಾಗಿ ಇಂದಿರಾ ಅವಧಿ ಹಿಮ್ಮೆಟ್ಟಿದ ಮೋದಿ

ಲೋಕಬಂಧು ನ್ಯೂಸ್, ನವದೆಹಲಿ
ಪ್ರಧಾನಮಂತ್ರಿ ನರೇಂದ್ರ ಮೋದಿ ನಿರಂತರ 4,078 ದಿನಗಳ ಕಾಲ ಅಧಿಕಾರ ಪೂರೈಸಿ, ಭಾರತದ ಇತಿಹಾಸದಲ್ಲಿ ಅತಿ ಹೆಚ್ಚು ಕಾಲ ನಿರಂತರ ಸೇವೆ ಸಲ್ಲಿಸಿದ ಎರಡನೇ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆ ಮೂಲಕ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ 4,077 ದಿನಗಳ ಸತತ ಅಧಿಕಾರಾವಧಿಯ ದಾಖಲೆಯನ್ನು ಮುರಿದಿದ್ದಾರೆ. ಈ ಪಟ್ಟಿಯಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಅಗ್ರಸ್ಥಾನದಲ್ಲಿದ್ದಾರೆ.74ರ ಹರೆಯದ ನರೇಂದ್ರ ಮೋದಿ 2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು ಮತ್ತು ಇಲ್ಲಿಯವರೆಗೆ ಒಟ್ಟು 11 ವರ್ಷ 60 ದಿನಗಳು ಅಧಿಕಾರದಲ್ಲಿದ್ದಾರೆ.
ಅತಿ ಹೆಚ್ಚು ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕಾಂಗ್ರೆಸ್ಸೇತರ ಪಕ್ಷದ ಪ್ರಧಾನಿ ಎಂಬ ಕೀರ್ತಿಗೂ ಮೋದಿ ಪಾತ್ರರಾಗಿದ್ದಾರೆ.


ಪ್ರಧಾನಿ ಇಂದಿರಾ ಗಾಂಧಿ ಸತತ 11 ವರ್ಷ 59 ದಿನಗಳ ಕಾಲ ಅಧಿಕಾರದಲ್ಲಿದ್ದರು. ಅವರು 1966ರ ಮಾ. 24ರಿಂದ 1977ರ ಮಾರ್ಚ್ 24ರ ವರೆಗೆ ಭಾರತದ ಪ್ರಧಾನ ಮಂತ್ರಿಯಾಗಿ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ್ದರು.


ಅದಕ್ಕೂ ಪೂರ್ವದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು 2947ರ ಆಗಸ್ಟ್ 15ರಿಂದ 1964ರ ಮೇ 27ರ ವರೆಗೆ ಸತತ 16 ವರ್ಷ 286 ದಿನಗಳ ಕಾಲ ಪ್ರಧಾನಿಯಾಗಿ ಭಾರತದ ದೀರ್ಘಾವಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ದಾಖಲೆ ಹೊಂದಿದ್ದಾರೆ.


ಪ್ರಧಾನಿಯಾಗುವ ಮುನ್ನ ನರೇಂದ್ರ ಮೋದಿ 2001ರಿಂದ 2014ರ ವರೆಗೆ ಅಧಿಕಾರದಲ್ಲಿದ್ದ ಗುಜರಾತ್‌ನ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 2014ರ ನಂತರ ಮೋದಿ ಲೋಕಸಭೆಯತ್ತ ಮುಖಮಾಡಿದರು,


ಇಂದಿರಾ ಗಾಂಧಿ ನಂತರ (1971ರಲ್ಲಿ) ಬಹುಮತದೊಂದಿಗೆ ಮರು ಆಯ್ಕೆಯಾದ ಮೊದಲ ಪ್ರಧಾನಿ ಮತ್ತು ಜವಾಹರಲಾಲ್ ನೆಹರು ಹೊರತುಪಡಿಸಿ ಪಕ್ಷದ ನಾಯಕನಾಗಿ ಸತತ ಮೂರು ಚುನಾವಣೆಗಳನ್ನು ಗೆದ್ದ ಏಕೈಕ ಪ್ರಧಾನಿ ಮೋದಿ ಆಗಿದ್ದಾರೆ.


2014 ಮತ್ತು 2019 ಹಾಗೂ 2024ರಲ್ಲಿ ಸಂಸತ್ತಿನ ಚುನಾವಣೆಗಳಲ್ಲಿ ದಾಖಲೆಯ ಲೋಕಸಭಾ ಗೆಲುವಿನೊಂದಿಗೆ ಸತತ ಮೂರನೇ ಬಾರಿ ಪ್ರಧಾನಿಯಾಗಿ ಆಯ್ಕೆಯಾಗುವ ಮೂಲಕ ಈಗಾಗಲೇ ನೆಹರೂ ದಾಖಲೆಯನ್ನು ಮೋದಿ ಸರಿಗಟ್ಟಿದ್ದಾರೆ. 2014ರಲ್ಲಿ ಬಿಜೆಪಿಯು 272 ಬಹುಮತದೊಂದಿಗೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಮೋದಿ ಪಕ್ಷದ ಪ್ರಧಾನಿ ಅಭ್ಯರ್ಥಿಯಾದರು.


ಐದು ವರ್ಷಗಳ ನಂತರ ಬಿಜೆಪಿ ಪಕ್ಷವು 543 ಲೋಕಸಭಾ ಸ್ಥಾನಗಳಲ್ಲಿ 303 ಸ್ಥಾನಗಳನ್ನು ಗೆದ್ದು ತನ್ನ ಸಂಖ್ಯೆಯನ್ನು ಸುಧಾರಿಸಿತು. 2024ರಲ್ಲಿ ಬಿಜೆಪಿ ಅರ್ಧದಷ್ಟು ಸ್ಥಾನಗಳನ್ನು ತಲುಪಲು ವಿಫಲವಾದರೂ ಪಾಲುದಾರರ ಬೆಂಬಲದೊಂದಿಗೆ ಸತತ ಮೂರನೇ ಅವಧಿಗೆ ಸರ್ಕಾರ ರಚಿಸಿ ಸೇವೆ ಸಲ್ಲಿಸುತ್ತಿರುವುದರೊಂದಿಗೆ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ.

Ads on article

Advertise in articles 1

advertising articles 2

Advertise under the article