Nurse ನಿಮಿಷಪ್ರಿಯಾ ಗಲ್ಲು ಶಿಕ್ಷೆ ರದ್ದು
Wednesday, July 23, 2025
ಲೋಕಬಂಧು ನ್ಯೂಸ್, ನವದೆಹಲಿ
ಭಾರತ ಮತ್ತು ಯೆಮೆನ್ ದೇಶದ ಪ್ರಮುಖರ ಸತತ ಸಂಧಾನ ಪ್ರಯತ್ನದ ಫಲವಾಗಿ ಕೇರಳ ಮೂಲದ ನರ್ಸ್ ನಿಮಿಷಪ್ರಿಯಾ, ಮರಣ ದಂಡನೆ ಶಿಕ್ಷೆಯಿಂದ ಪಾರಾಗಿದ್ದು ಆಕೆಗೆ ವಿಧಿಸಿದ್ದ ಮರಣ ದಂಡನೆಯನ್ನು ಯೆಮೆನ್ ದೇಶ ರದ್ದುಗೊಳಿಸಿದೆ ಎಂದು ಜಾಗತಿಕ ಶಾಂತಿ ಪ್ರವರ್ತಕ ಡಾ.ಎ.ಕೆ.ಪೌಲ್ ವಿಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ.ನಿಮಿಷಾ ಗಲ್ಲು ಶಿಕ್ಷೆ ರದ್ದಾಗಲು ಶ್ರಮಿಸಿದ ಎಲ್ಲ ನಾಯಕರಿಗೂ ಧನ್ಯವಾದಗಳು. ಅವರನ್ನು ಬಿಡುಗಡೆ ಮಾಡಿ ಭಾರತಕ್ಕೆ ಕರೆದೊಯ್ಯಲಾಗುವುದು.
ಆಕೆಯನ್ನು ಸುರಕ್ಷಿತವಾಗಿ ಕರೆದೊಯ್ಯಲು ಸಿದ್ಧತೆ ನಡೆಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೂ ಪೌಲ್ ಕೃತಜ್ಞತೆ ಸಲ್ಲಿಸಿದ್ದಾರೆ.