Udupi: ಸಾಮವೇದ ಅಧ್ಯಯನಕ್ಕೆ ದತ್ತಿನಿಧಿ
Wednesday, July 23, 2025
ಲೋಕಬಂಧು ನ್ಯೂಸ್, ಉಡುಪಿ
ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ ಆಶ್ರಯದಲ್ಲಿ ಮಂಗಳವಾರ ಶ್ರೀ ಸುಜ್ಞಾನೇಂದ್ರತೀರ್ಥ ಶ್ರೀಪಾದರ ಆರಾಧನಾ ಮಹೋತ್ಸವ ಸಂದರ್ಭದಲ್ಲಿ ದಿ.ಸಾಮಗ ನರಸಿಂಹ ಆಚಾರ್ಯ ಮಟಪಾಡಿ ಸ್ಮರಣಾರ್ಥ ಸಾಮವೇದ ಅಧ್ಯಯನಕ್ಕಾಗಿ ಕುಟುಂಬಸ್ಥರಿಂದ ಇಲ್ಲಿನ ಪುತ್ತಿಗೆ ಸಂಧ್ಯಾ ವಿದ್ಯಾಪೀಠಕ್ಕೆ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ದತ್ತಿನಿಧಿ ಸಮರ್ಪಿಸಲಾಯಿತು.