Udupi: ಸುಗಂಧಿ ಉಮೇಶ್ ಕಲ್ಮಾಡಿಗೆ ನಾಟಕ ಅಕಾಡೆಮಿ ಪ್ರಶಸ್ತಿ
Thursday, July 24, 2025
ಲೋಕಬಂಧು ನ್ಯೂಸ್, ಉಡುಪಿ
ಕರ್ನಾಟಕ ನಾಟಕ ಅಕಾಡೆಮಿಯ ವಾರ್ಷಿಕ ಪ್ರಶಸ್ತಿಗೆ ಉಡುಪಿಯ ರಂಗಭೂಮಿ ಕಲಾವಿದೆ ಸುಗಂಧಿ ಉಮೇಶ್ ಕಲ್ಮಾಡಿ ಆಯ್ಕೆಯಾಗಿದ್ದಾರೆ.ಬಾಲ್ಯದಿಂದಲೇ ಸಂಗೀತ ನೃತ್ಯ ನಾಟಕಗಳಲ್ಲಿ ತೊಡಗಿಕೊಂಡಿದ್ದ ಅವರು, ಡಾ.ಚಂದ್ರಶೇಖರ ಕಂಬಾರರ `ಸಿರಿಸಂಪಿಗೆ' ನಾಟಕದ ಮೂಲಕ ರಂಗ ಪ್ರವೇಶ ಮಾಡಿದರು.
ದಂಗೆಯ ಮುಂಚಿನ ದಿನಗಳು, ಪಿಲಿ ಪತ್ತಿ ಗಡಸ್, ಆರ್ ಬರ್ಪೆರ್, ಹುಲಿಯ ನೆರಳು, ಅಶುದ್ಧ, ಕಾಳಾಪುರ ಖಿಲೇಸಿ, ಧರ್ಮೇತಿ ಮಾಯೆ, ದೊಂಬರ ಚಿನ್ನಿ, ಮೀಡಿಯಾ, ಬದ್ಕರೆ ಆಪುಜಿ, ಹೂವು, ಕಿಟ್ಟಪ್ಪನ ಕಿತಾಪತಿ, ಪೀಠಾರೋಹಣ, ಪಂಪನಿಗೆ ಬಿದ್ದ ಕನಸು, ಮೂರು ಹೆಜ್ಜೆ ಮೂರು ಲೋಕ, ಒಂದು ಚೂರಿಯ ಕಥೆ, ದಶಾನನ ಸ್ವಪ್ನ ಸಿದ್ಧಿ, ಅಣ್ಣಾವಾಲೀ, ಅವ್ವ ನನ್ನವ್ವ ಮುಂತಾದ 50ಕ್ಕೂ ಹೆಚ್ಚು ನಾಟಕಗಳಲ್ಲಿ ಕಥಾ ನಾಯಕಿಯ ಪಾತ್ರಗಳಲ್ಲಿ ಅಭಿನಯಿಸಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಅನೇಕ ಪ್ರಶಸ್ತಿ ಸನ್ಮಾನಗಳನ್ನು ಪಡೆದಿದ್ದಾರೆ.
ಮುದ್ರಾಡಿ ಶ್ರೀ ಆದಿಶಕ್ತಿ ದೇವಸ್ಥಾನದ ಧರ್ಮದರ್ಶಿಯಾಗಿದ್ದ ಮೋಹನ್ ಪಾತ್ರಿ ಮತ್ತು ಕಮಲ ದಂಪತಿ ಪುತ್ರಿ ಸುಗಂದಿ ಉಮೇಶ್ ಕಲ್ಮಾಡಿ ಅವರು ಮುದ್ರಾಡಿಯ `ನಮ ತುಳುವೆರ್' ನಾಟಕ ತಂಡದಲ್ಲಿದ್ದಾರೆ.