
Udupi: ಪಾಲೆದ ಕಷಾಯ ವಿತರಣೆ
Thursday, July 24, 2025
ಲೋಕಬಂಧು ನ್ಯೂಸ್, ಉಡುಪಿ
ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಜಿಲ್ಲಾಧ್ಯಕ್ಷ ಪ್ರಭಾಕರ ಪೂಜಾರಿ ನೇತೃತ್ವದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ಸಾರ್ವಜನಿಕರಿಗೆ ಪಾಲೆಮರದ ತೊಗಟೆ ಕಷಾಯ (ಆಟಿ ಕಷಾಯ) ವಿತರಣೆ ಗುರುವಾರ ನಗರದ ಸರ್ವಿಸ್ ಬಸ್ ನಿಲ್ದಾಣ ಬಳಿಯ ಕ್ಲಾಕ್ ಟವರ್ ಮುಂಭಾಗದಲ್ಲಿ ಬೆಳಿಗ್ಗೆ 7 ಗಂಟೆಯಿಂದ ಹಮ್ಮಿಕೊಳ್ಳಲಾಗಿತ್ತು.
ಸಾರ್ವಜನಿಕರು ಆಟಿ ಕಷಾಯ ಸ್ವೀಕರಿಸಿ, ಉತ್ತಮ ಕಾರ್ಯಕ್ರಮ ಆಯೋಜಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಗರಸಭಾ ವಿಪಕ್ಷ ನಾಯಕ ರಮೇಶ್ ಕಾಂಚನ್, ಉದ್ಯಮಿ ಜೇಸನ್ ಡಯಾಸ್, ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಅನಿಲ್ ಪೂಜಾರಿ ಮತ್ತು ಸಾಬೂದ್ದೀನ್, ಪ್ರಧಾನ ಸಂಚಾಲಕ ಕಿರಣ್ ಪಿಂಟೋ, ಜೊತೆ ಕಾರ್ಯದರ್ಶಿ ಮಜೀದ್, ಜಿಲ್ಲಾ ಮಹಿಳಾ ಘಟಕದ ಜಯಶ್ರೀ ಸುವರ್ಣ, ಸದಸ್ಯರಾದ ಅಜರುದ್ದೀನ್, ನಾಗಲಕ್ಷ್ಮಿ, ಪೂರ್ಣಿಮಾ ಮೊದಲಾದವರಿದ್ದರು.